This is the title of the web page

ಕೋವಿಡ್; ಒಂದೇ ದಿನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಶೇ. 250 ಏರಿಕೆ

ಬೆಳಗಾವಿ, 3- ಗಡಿಜಿಲ್ಲೆ ಬೆಳಗಾವಿಯಲ್ಲಿ ಕೊರೋನಾ ಸೋಂಕು ನಿರೀಕ್ಷೆಗೂ ಮೀರಿ ತೀವ್ರವಾಗಿ ವ್ಯಾಪಿಸುತ್ತಿದ್ದು ಶನಿವಾರ ಕೇವಲ 10 ಜನರಲ್ಲಿ ಕಂಡು ಬಂದಿದ್ದ ಸೋಂಕು ರವಿವಾರ 35 ಜನರಿಗೆ ವ್ಯಾಪಿಸಿದೆ.

ಆತಂಕವೆಂದರೆ ಕೋವಿಡ್ ನಿಯಮದ ಎರಡೂ ಲಸಿಕೆ ಪಡೆದಿರುವ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ ವಿ ದರ್ಶನ್, 18 ವರುಷದ ಇಬ್ಬರು ಹಾಗೂ 32 ಇತರರಲ್ಲಿ ಸೋಂಕು ಕಂಡುಬಂದಿದೆ.

ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದ ಅಧಿಕಾರಿ ದರ್ಶನ್ ಪುನಃ ಪರೀಕ್ಷೆಗೊಳಗಾದಾಗ ಅವರು ಸೊಂಕಿತರೆಂದು ಕಂಡು ಬಂದಿದ್ದು ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದು ತಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವದು ಸೂಕ್ತವೆಂದು ವಿನಂತಿಸಿಕೊಂಡಿದ್ದಾರೆ.

You might also like
Leave a comment