This is the title of the web page

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ

ಬೆಂಗಳೂರು, ಜ.25 – ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ 40 ಸಾವಿರ ಗಡಿ ದಾಟಿದ್ದು ಬಹು ದಿನಗಳ ನಂತರ 52 ಮಂದಿ ಸಾವನ್ನಪ್ಪಿರುವ ವರದಿ ಬಂದಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 41,400 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.26.70 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,50,742 ಕ್ಕೆ ಏರಿಕೆಯಾಗಿದೆ. ಇಂದು 52 ಮಂದಿ ಸಾವನ್ನಪ್ಪಿದ್ದಾರೆ. ಅವಧಿಯಲ್ಲಿ 53,093 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು 19,105 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದು ಸಹಜವಾಗಿ ಆತಂಕ ಇನ್ನಷ್ಟು ಹೆಚ್ಚು ಮಾಡಿದೆ.ಬರೀ ಬೆಂಗಳೂರಿನಲ್ಲಿ ಮಾತ್ರ ಏರಿಕೆಯಾಗುತ್ತಿದ್ದ ಸೋಂಕು ಸಂಖ್ಯೆ ರಾಜ್ಯದ‌ ವಿವಿಧ ಜಿಲ್ಲೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

ರಾಜಧಾನಿಯಲ್ಲಿ  33,011 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದು ಇಂದು 19 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿನಿಂದ ಸಾವನ್ನಪ್ಪಿದವರ ಅಧಿಕೃತ ಸಂಖ್ಯೆ 38,666 ಕ್ಕೆ ಏರಿಕೆ.

ರಾಜ್ಯದಲ್ಲಿ ಇಂದು 1,55,054 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 6,08,50,911 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲಾವಾರು ಇಂದಿನ ಪ್ರಕರಣಗಳು :

  • ಬಾಗಲಕೋಟ- 402
  • ಬಳ್ಳಾರಿ – 775
  • ಬೆಳಗಾವಿ – 977
  • ಬೆಂಗಳೂರು ಗ್ರಾಮಾಂತರ- 958
  • ಬೆಂಗಳೂರು ನಗರ. – 19,105
  • ಬೀದರ್ 403
  • ಚಾಮರಾಜನಗರ- 589
  • ಚಿಕ್ಕಬಳ್ಳಾಪುರ- 915
  • ಚಿಕ್ಕಮಗಳೂರು- 244
  • ಚಿತ್ರದುರ್ಗ- 649
  • ದಕ್ಷಿಣ ಕನ್ನಡ – 667
  • ದಾವಣಗೆರೆ- 403
  • ಧಾರವಾಡ- 1511
  • ಗದಗ- 168
  • ಹಾಸನ- 1381
  • ಹಾವೇರಿ- 164
  • ಕಲಬುರಗಿ- 573
  • ಕೊಡಗು- 389
  • ಕೋಲಾರ- 2185
  • ಕೊಪ್ಪಳ- 310
  • ಮಂಡ್ಯ- 1495
  • ಮೈಸೂರು- 1494
  • ರಾಯಚೂರು- 214
  • ರಾಮನಗರ – 242
  • ಶಿವಮೊಗ್ಗ- 494
  • ತುಮಕೂರು- 2,026
  • ಉಡುಪಿ- 1202
  • ಉತ್ತರ ಕನ್ನಡ- 1007
  • ವಿಜಯಪುರ – 333
  • ಯಾದಗಿರಿ- 125
You might also like
Leave a comment