This is the title of the web page

ಬೆಳಗಾವಿಯಲ್ಲಿ ಕೋವಿಡ್ ಗೆ ಬಾಲಕಿ ಬಲಿ: ಕಠಿಣ ಕ್ರಮ ಅನಿವಾರ್ಯ -ಸಿಎಂ

ಬೆಳಗಾವಿ, 25- ಕೊರೋನಾ ಹೊಸತಳಿ ಓಮಿಕ್ರಾನ್ ಸೋಂಕು ಬೆಳಗಾವಿಯಲ್ಲಿ 11 ವರ್ಷದ ಬಾಲಕಿಯನ್ನು ನಿನ್ನೆ ಶುಕ್ರವಾರ ಬಲಿಪಡೆದಿದೆ.

ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ. ಅದೇ ರೀತಿ ನಾಲ್ಕು ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಒಮಿಕ್ರಾನ್ ದೇಶದಲ್ಲಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮಾತ್ರ ಒಮಿಕ್ರಾನ್ ಕಾಟ ಹೆಚ್ಚಿತ್ತು. ಇದೀಗ ತಮಿಳುನಾಡಿನಲ್ಲಿಯೂ ಹೆಚ್ಚಾಗುತ್ತಿದೆ. ಸದ್ಯ ಇದು ನಮಗೆ ಆತಂಕಕ್ಕೆ ಕಾರಣವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಬಾಲಕಿ ಸೋಂಕಿಗೆ ಬಲಿಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಠಿಣ ಕ್ರಮ ಜಾರಿಮಾಡದಿದ್ದರೆ ಕಷ್ಟ ಎಂದು ಕಠಿಣ ಸ್ಥಿತಿ ಘೋಷಣೆ ಅನಿವಾರ್ಯ ಎಂದು ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿಗೆ ಹೋದ ತಕ್ಷಣ ಎಲ್ಲ ಪ್ರಮುಖರ ಜೊತೆಗೆ ಚರ್ಚೆ ಮಾಡಿ, ಈಗಿರುವ ಸ್ಥಿತಿಗತಿ ಅನುಗುಣವಾಗಿ ಮತ್ತೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ತೀರ್ಮಾನ ಮಾಡುತ್ತೇವೆ ಎಂದರು.

ಹೊಸ ವರ್ಷದ ಆಚರಣೆ ಬಗ್ಗೆಯೂ ತಜ್ಞರ ಜೊತೆಗಿನ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದೂ ಹೇಳಿದರು.

You might also like
Leave a comment