This is the title of the web page

ಕ್ರಿಷಾ ಆತ್ಮಹತ್ಯೆ; ಓರ್ವನ ಬಂಧನ

ಬೆಳಗಾವಿ, 15- ಇಲ್ಲಿನ ಸಹ್ಯಾದ್ರಿ ನಗರದ ಕ್ರಿಷಾ ಕೇಶ್ವಾನಿ ಮತ್ತು ಅವರ ಇಬ್ಬರು ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ ಕೇಶ್ವಾನಿ ಎಂಬವರನ್ನು ಬಂಧಿಸಲಾಗಿದೆ.

ಹಿಂಡಲಗಾ ರಸ್ತೆಯಲ್ಲಿರುವ ಗಣಪತಿ ಮಂದಿರದ ಬಳಿಯಿರುವ ನಾಲ್ಕು ನೀರಿನ ಹೊಂಡಗಳಲ್ಲಿ ಕೊನೆಯ ಹೊಂಡದಲ್ಲಿ ಕ್ರಿಷಾ ಅವರು ತಮ್ಮಿಬ್ಬರು ಚಿಕ್ಕ ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ರಿಷಾ ತವರು ಮನೆಯವರು ನೀಡಿದ ದೂರಿನಂತೆ ಮನೀಶ್ ಕೇಶವಾನಿ ಎಂಬವರನ್ನು ಬಂಧಿಸಲಾಗಿದೆ. ದೂರಿನಲ್ಲಿ ನಮೂದಿಸಿರುವ ಉಳಿದವರನ್ನೂ ಸಹ ಬಂಧಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಆದ ವಿಳಂಬದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಯಲ್ಲಿ ಮೃತದೇಹ ಸಿಗಲು ವಿಳಂಬವಾಯಿತು ಎಂದರು.

You might also like
Leave a comment