This is the title of the web page

ಕಾಲೇಜ್ ಬಸ್ಸಿಗೆ ಸರಕಾರಿ ಬಸ್ ಢಿಕ್ಕಿ; 20 ಜನರಿಗೆ ಗಾಯ

 

ಬೆಳಗಾವಿ, ೯- ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ರಸ್ತೆಬದಿ ನಿಂತಿದ್ದ ಕಾಲೇಜ್ ಬಸ್ ಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ಸೊಂದು ಹಿಂದಿನಿಂದ ಢಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿದ್ದ 20 ಜನ ಗಾಯಗೊಂಡಿರುವ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದ ಹೊರ ವಲಯದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮೂಡಲಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತರಲು ತೆರಳಿದ್ದ ಬಸ್ಸಿನಲ್ಲಿ ಕೆಲ ವಿದ್ಯಾರ್ಥಿಗಳಿದ್ದರು. ಅದರಂತೆ ಇನ್ನೂ ಕೆಲವರು ಬಸ್ ಹತ್ತುತ್ತಿದ್ದರು. ಆಗ ಹಿಂದಿನಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ. ಸರಕಾರಿ ಬಸ್ ನಲ್ಲಿ ಹಾಗೂ ಕಾಲೇಜ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತಲಾ ಹತ್ತು ಜನರಿಗೆ ಅಂದರೆ ಇಪ್ಪತ್ತು ಜನರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಮೂಡಲಗಿ ಹಾಗು ಗೋಕಾಕ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಸರಕಾರಿ ಬಸ್ ಢಿಕ್ಕಿ ಹೊಡೆದ ರಭಸಕ್ಕೆ ಕಾಲೇಜ್ ಬಸ್ ರಸ್ತೆ ಬದಿಗೆ ತೆರಳಿ ನಿಂತಿದೆ.

ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment