This is the title of the web page

ಮೂಲಭೂತ ಸೌಕರ್ಯಗಳ ಕೊರತೆ; ಮೇಲ್ವಿಚಾರಕರ ಮೇಲೆ ಕೊಳಚೆ ನೀರು ಎರಚಿದ ಮಹಿಳೆ

ಬೆಳಗಾವಿ, ೧೦- ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯದ ಕಾರಣ ಮಹಿಳೆಯೊಬ್ಬರು ಸ್ವಚ್ಛತಾ ಮೇಲ್ವಿಚಾರಕರೊಬ್ಬರ ಮೇಲೆ ಕೊಳಚೆ ನೀರು ಎರಚಿದ ಪ್ರಕರಣ ಇಂದು ದೇಶಪಾಂಡೆ ಗಲ್ಲಿಯಲ್ಲಿ ಸಂಭವಿಸಿದೆ.

ದೇಶಪಾಂಡೆ ಗಲ್ಲಿಯಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರನ ಸುಪರವೈಸರ್ ಹಾಗೂ ಸ್ಥಳೀಯ ಮಹಿಳೆಯ ನಡುವೆ ವಾಗ್ವಾದ ನಡೆದು ಸ್ಥಳೀಯ ಮಹಿಳೆಯೊಬ್ಬರು ಸುಪರವೈಸರ್ ಮೇಲೆ ಗಲೀಜು ನೀರನ್ನು ಎರಚಿದ ಘಟನೆ ನಡೆಸಿದೆ.

ಬೆಳಗಾವಿಯ ದೇಶಪಾಂಡೆ ಗಲ್ಲಿ, ಬಸವನಗಲ್ಲಿ, ಮಾರುತಿ ಗಲ್ಲಿ, ಮೊದಲಾದ ಭಾಗಗಳ ನಿವಾಸಿಗಳು ಅಲ್ಲಿನ ವಿವಿಧ ಅನಾನುಕೂಲತೆಗಳನ್ನು ಕುರಿತಂತೆ ನಗರ ಸೇವಕ ಜಯತೀರ್ಥ ಸವದತ್ತಿ ಹಾಗೂ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರನ ಸುಪರವೈಸರ್ ಜೊತೆಗೆ ಸ್ಥಳೀಯ ನಿವಾಸಿಗಳು ಮಾತನಾಡುತ್ತಿದ್ದರು.
ರಸ್ತೆ, ಬೀದಿದೀಪ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ನಗರ ಸೇವಕರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಈ ವೇಳೆ ಕುಡಿಯುವ ನೀರು ಗಲೀಜಾಗಿರುವ ಕುರಿತಂತೆ ಸ್ಥಳೀಯ ನಾಗರಿಕರು ಹಾಗೂ ಸುಪರವೈಸರ್ ನಡುವೆ ನಡೆದ ವಾಗ್ವಾದದಲ್ಲಿ ಮಹಿಳೆಯೋರ್ವರು  ಮೇಲೆ ಗಲೀಜು ನೀರನ್ನು ಎರಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

You might also like
Leave a comment