This is the title of the web page

ಲಾಲು ಪ್ರಸಾದ ಯಾದವ ಸ್ಥಿತಿ ಗಂಭೀರ

ರಾಂಚಿ, 22- ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕ ಲಾಲು ಪ್ರಸಾದ ಯಾದವ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ದೆಹಲಿಯ ಏಮ್ಸಗೆ ಸ್ಥಳಾಂತರಿಸಲಾಗಿದೆ.

ಮೇವು ಹಗರಣ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥರು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಬಹು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.

 

ಶುಕ್ರವಾರ ಲಾಲು ಪ್ರಸಾದ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ಈಗ ಕಳೆದ ಎರಡು ದಿನಗಳಿಂದ ಅವರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿ, ಉತ್ತಮ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ನಾವು ಅವರನ್ನು ದೆಹಲಿಯ ಏಮ್ಸಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ರಿಮ್ಸ ನಿರ್ದೇಶಕ ಡಾ.ಕಾಮೇಶ್ವರ ಪ್ರಸಾದ ತಿಳಿಸಿದ್ದಾರೆ.

ಲಾಲು ಅವರ ಪತ್ನಿ ರಾಬ್ಡಿ ದೇವಿ, ಮಗಳು ಮಿಸಾ ಭಾರತಿ, ಮಕ್ಕಳಾದ ತೇಜ ಪ್ರತಾಪ ಮತ್ತು ತೇಜಸ್ವಿ ಅವರು ರಾಂಚಿ ತಲುಪಿ ರಾತ್ರಿ ಅವರನ್ನು ಭೇಟಿಯಾದರು. ತನ್ನ ತಂದೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತೇಜಸ್ವಿ ತಿಳಿಸಿದ್ದಾರೆ.

You might also like
Leave a comment