This is the title of the web page

ಬೆಳಗಾವಿ ಸೋಲಿಗೆ ಕಾರಣ ಯಾರು ಎಂಬುದರ ತನಿಖೆಯಾಗಲಿ

ಬೆಳಗಾವಿ, 15- ಬೆಳಗಾವಿ ಸೋಲು ಅರಗಿಸಿಕೊಳ್ಳಲಾಗದು, ಇಷ್ಟು ಜನ ಶಾಸಕರು, ಸಂಸದರು ಇದ್ದೂ ಸೋಲುವದೆಂದರೇನು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಪಕ್ಷದ ಸಾಧನೆ ಚೆನ್ನಾಗಿದೆ, ಆದರೆ ತೃಪ್ತಿಕರವಾಗಿಲ್ಲ, ಇದಕ್ಕಿಂತ ಹೆಚ್ಚು ನಿರೀಕ್ಷೆಯಲ್ಲಿದ್ದೆವು. ಮೈಸೂರು, ಬೆಳಗಾವಿಯಲ್ಲಿ ಈ ಫಲಿತಾಂಶ ಬರಬಹುದೆಂದುಕೊಂಡಿರಲಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಮತ್ತು ಬೆಳಗಾವಿಯಲ್ಲಿ ನೂರಕ್ಕೆ ನೂರು ಗೆದ್ದೆ ಗೆಲ್ಲುತ್ತೇವೆ ಅಂದುಕೊಂಡಿದ್ದೇವು. ಆದರೆ ಅಲ್ಲಿ ಹಿನ್ನಡೆಯಾಗಿದೆ ಎಂದರು.

13 ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭೆ ಸದಸ್ಯರು, ಇಬ್ಬರು ಮಂತ್ರಿಗಳಿದ್ದೂ ಸಹ ಬೆಳಗಾವಿಯಲ್ಲಿ ಸೋಲುವದೆಂದರೇನು? ಕವಟಗಿಮಠ ಸೋಲಿನ ಬಗ್ಗೆ ಚಿಂತನೆ ಮಾಡಬೇಕಿದೆ. ಯಾರು ನಮಗೆ ಸಹಕಾರ ನೀಡಿಲ್ಲ ಎನ್ನುವ ಬಗ್ಗೆ ತನಿಖೆ ಆಗಬೇಕಿದೆ ಎಂದರು.

You might also like
Leave a comment