This is the title of the web page

ಅಡುಗೆ ಅನಿಲ, ಪೆಟ್ರೋಲ-ಡೀಸೆಲ್ ದರ ಏರಿಕೆ

ಹೊಸದಿಲ್ಲಿ, ೨೨:- ದೇಶದಲ್ಲಿ ಚುನಾವಣೆಗಳು ಮುಗಿದಿದ್ದು ಈಗ ದರ ಏರಿಕೆಯ ಸಮಯ. ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ದೇಶಾದ್ಯಂತ 80 ಪೈಸೆ ಏರಿಕೆಯಾಗಿದೆಯಲ್ಲದೇ ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳವಾಗಿದೆ.

ನಾಲ್ಕೂವರೆ ತಿಂಗಳ ನಂತರ ಇಂಧನ ಬೆಲೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 101 ರೂಪಾಯಿ 42 ಪೈಸೆಯಾಗಿದ್ದರೆ ಡೀಸೆಲ್ ದರ ಲೀಟರ್ ಗೆ 85 ರೂಪಾಯಿ 80 ಪೈಸೆಯಾಗಿದೆ. ಇನ್ನು ಎಲ್ ಪಿಜಿ ಸಿಲಿಂಡರ್ ಬೆಲೆ 902 ರೂಪಾಯಿ 50 ಪೈಸೆಯಾಗಿದೆ.

ದೆಹಲಿಯಲ್ಲಿ ಪೆಟ್ರೊಲ್ ಬೆಲೆ ಲೀಟರ್ ಗೆ 96 ರೂಪಾಯಿ 21 ಪೈಸೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 95 ರೂಪಾಯಿ 41 ಪೈಸೆಯಾಗಿತ್ತು. ಡೀಸೆಲ್ ಬೆಲೆ 86 ರೂಪಾಯಿ 67 ಪೈಸೆಯಿಂದ 87 ರೂಪಾಯಿ 47 ಪೈಸೆಗೆ ಹೆಚ್ಚಳವಾಗಿದೆ.

14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 949 ರೂಪಾಯಿ 50 ಪೈಸೆಯಾಗಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ ಕಳೆದ ಬಾರಿ ಹೆಚ್ಚಳವಾಗಿದ್ದು ಅಕ್ಟೋಬರ 6ರಂದು. ಕಳೆದ ಬಾರಿ ನವೆಂಬರ್ 4ರಂದು ಪೆಟ್ರೊಲ್-ಡೀಸೆಲ್ ಬೆಲೆ ಹೆಚ್ಚಳವಾಗಿತ್ತು. ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳು ಇಂಧನ ದರ ಏರಿಕೆಯಾಗಿರಲಿಲ್ಲ.

5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂಪಾಯಿ ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2003.50 ರೂಪಾಯಿಗಳಾಗಿದೆ.

You might also like
Leave a comment