This is the title of the web page

ಗೃಹ ಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ದರ ಮತ್ತೆ ಹೆಚ್ಚಳ

ಹೊಸದಿಲ್ಲಿ, 19- ದೇಶದ ನಾಗರಿಕರಿಗೆ ಮತ್ತೆ ಸಿಲಿಂಡರ್‌ ಬೆಲೆ ಏರಿಕೆಯ ಶಾಕ್‌ ನೀಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ. 3.50 ಮತ್ತು ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಇದರೊಂದಿಗೆ ಹಲವು ನಗರಗಳಲ್ಲಿ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್‌ಗಳ ದರವು 1000 ರೂಪಾಯಿ ದಾಟಿದೆ.

ಗುರುವಾರ, ಮೇ 19 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಈ ತಿಂಗಳು ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೇಶಾದ್ಯಂತದ ಬಹುತೇಕ ಎಲ್ಲಾ ನಗರಗಳಲ್ಲಿ ಸಿಲಿಂಡರ್‌ನ ಬೆಲೆ ಈಗ 1000 ರೂಪಾಯಿ ಆಗಿದೆ. ಏರಿಕೆಯೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1003 ರೂ., ಕೋಲ್ಕತ್ತಾದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1029 ರೂ., ಮತ್ತು ಚೆನ್ನೈನಲ್ಲಿ ಇಂದಿನಿಂದ 1018.5 ರೂಪಾಯಿ ಆಗಿದೆ.

ಇದೇ ಮೇ 7ರಂದು ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿತ್ತು. ಗೃಹಬಳಕೆಯ ಸಿಲಿಂಡರ್ ಜತೆಗೆ ವಾಣಿಜ್ಯ ಸಿಲಿಂಡರ್ ಕೂಡ ದುಬಾರಿ ಮಾಡಲಾಗಿತ್ತು.

You might also like
Leave a comment