This is the title of the web page

ರಾಜ್ಯದಲ್ಲಿ ಇಂದು 32793 ಜನರಲ್ಲಿ ಒಕ್ಕರಿಸಿತು ಮಹಾಮಾರಿ

ಬೆಂಗಳೂರು, 15- ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟ ಉಂಟಾಗಿದೆ. ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯಾದ್ಯಂತ 32,793 ಜನರಲ್ಲಿ ಕೋವಿಡ್ ಮಹಾಮಾರಿ ದೃಢಪಟ್ಟಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 2,18,479 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಅವರಲ್ಲಿ 32,793 ಸೊಂಕಿತರಾಗಿ ಕಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಎಂದನಂತೆ ಬೆಂಗಳೂರಿನಲ್ಲಿ ದಿನದ ಅತೀ ಹೆಚ್ಚು ಅಂದರೆ 22,284 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಇಂದು ರಾಜ್ಯದಲ್ಲಿ 32,793 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ ಶೇ. 15%ಕ್ಕೆ ಏರಿಕೆಯಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 4,273 ಜನರು ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 05 ಜನರು ಸೇರಿದಂತೆ 07 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ 393 ಕೇಸ್‍ಗಳು ಪತ್ತೆಯಾಗಿ ಒಟ್ಟು ಸೋಂಕಿತರ ಸಂಖ್ಯೆ 81982ಕ್ಕೆ ಏರಿಕೆಯಾಗಿದೆ. ಇಂದು 38 ಜನರು ಗುಣಮುಖರಾಗಿದ್ದು, ಈ ವರೆಗೆ 79282 ಜನರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 1751 ಆಕ್ಟಿವ್ ಕೇಸ್‍ಗಳು ಬಾಕಿಯಿವೆ.

ಬೆಳಗಾವಿ ನಗರ ತಾಲೂಕಿನಲ್ಲಿಯೇ 179 ಕೇಸ್‍ಗಳು ದಾಖಲಾಗಿದ್ದರೆ, ಅಥಣಿ-94, ಬೈಲಹೊಂಗಲ-12, ಚಿಕ್ಕೋಡಿ-41, ಗೋಕಾಕ-05, ಹುಕ್ಕೇರಿ-08, ಖಾನಾಪುರ-01, ರಾಮದುಗ-15, ರಾಯಬಾಗ-19, ಸವದತ್ತಿ-19 ಕೊರೊನಾ ಪ್ರಕರಣ ದೃಢಪಟ್ಟಿವೆ.

You might also like
Leave a comment