This is the title of the web page

ಪೊಲೀಸರ ಮೇಲೆ ಹಲ್ಲೆ ಯತ್ನದ ಆರೋಪ; ಮಹಾರಾಷ್ಟ್ರ ವೈದ್ಯನ ಬಂಧನ

ಬೆಳಗಾವಿ, 28- ಗಡಿಯಲ್ಲಿ ಕೋವಿಡ್ ಸರ್ಟಿಫಿಕೇಟ್ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಮಹಾರಾಷ್ಟ್ರ ಮೂಲದ ವೈದ್ಯರೊಬ್ಬರು ಹಲ್ಲೆಗೆ ಯತ್ನಿಸಿದ ಘಟನೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಸರ್ಕಾರದ ಆದೇಶದಂತೆ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪುನಃ ತಪಾಸಣೆ ನಡೆಸಲಾಗುತ್ತಿದ್ದು ಪರ ರಾಜ್ಯಗಳಿಂದ ಬರುವವರು ಕೋವಿಡ್ ನೆಗೆಟಿವ್ ಆರ್ ಟಿ ಪಿಸಿಅರ್ ಸರ್ಟಿಫಿಕೇಟ್ ಪಡೆದಿರುವದು ಶನಿವಾರದಿಂದ ಕಡ್ಡಾಯ ಮಾಡಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಡಾ. ಸ್ವಾಮಿ ನಂದಿಮಠ ಎಂಬುವವರು ಕೋವಿಡ್ ನೆಗೆಟಿವ್ ವರದಿ ಮತ್ತು ಕೊರೊನಾ ಲಸಿಕೆ ಇಲ್ಲದೇ ಬರುತ್ತಿದ್ದರು. ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಇವರಿಗೆ ತಿಳಿಸಿದಾಗ ಕೆರಳಿದ ಡಾಕ್ಟರ್ ಹಾಗು ಅವರೊಂದಿಗಿದ್ದವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಲ್ಲದೇ ಅವಾಚ್ಚ ಶಬ್ದಗಳಿಂದ ನಿಂದನೆ ಮಾಡಿದರು ಎಂದು ಹೇಳಲಾಗಿದೆ. ಬಳಿಕ ಕಾರ ಇಳಿದು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕೊರಳುಪಟ್ಟಿ ಹಿಡಿದು ಎಳೆದಾಡಲು ವೈದ್ಯರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಬಳಿಕ‌ ವೈದ್ಯರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ನಂತರ ಅವರನ್ನು ವಶಕ್ಕೆ ಪಡೆಯಲಾಯಿತು.

You might also like
Leave a comment