This is the title of the web page

ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೋಲೀಸರ ಭದ್ರತೆ

ಬೆಳಗಾವಿ, 18- ಮಹಾರಾಷ್ಟ್ರದಲ್ಲಿದ್ದ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆಯೊದಗಿಸಿ ಸುರಕ್ಷಿತವಾಗಿ ರಾಜ್ಯದ ಗಡಿ ತಲುಪಿಸಿದ ಘಟನೆ ನಡೆದಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ರಾಜ್ಯದ ಇತರ ಭಾಗಗಳಿಂದ ಬಂದಿರುವ ಕೆಲವು ಪೊಲೀಸರು ಅಧಿವೇಶನಕ್ಕೆ ರಜೆಯಿದ್ದ ಕಾರಣ ಶನಿವಾರ ಕೊಲ್ಹಾಪುರ ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ತೆರಳಿದ್ದರು. ಲಕ್ಷ್ಮೀ ದೇವಿ ದರ್ಶನ ಬಳಿಕ ಬೆಳಗಾವಿಗೆ ಹಿಂದಿರುಗಬೇಕಿದ್ದ ಕರ್ನಾಟಕ ಪೋಲೀಸ ವಾಹನಕ್ಕೆ ಮಹಾರಾಷ್ಟ್ರ ಪೋಲೀಸರು ಭದ್ರತೆ ಒದಗಿಸಬೇಕಾಯಿತು.

ಮಹಾರಾಷ್ಟ್ರದ ಕೆಲವೆಡೆ ಕರ್ನಾಟಕ ರಾಜ್ಯದ ವಾಹನಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸ್ ವಾಹನದ ಮೇಲೂ ದಾಳಿಯ ಸಾಧ್ಯತೆ ಇದ್ದ ಕಾರಣ ಕೊಲ್ಹಾಪುರ ಪೊಲೀಸರು ರಾಜ್ಯದ ಪೊಲೀಸರಿಗೆ ಭದ್ರತೆ ಒದಗಿಸಿ ಸುರಕ್ಷಿತವಾಗಿ ರಾಜ್ಯಕ್ಕೆ ತಲುಪಿಸಿದ್ದಾರೆ. ರಾಜ್ಯದ ಗಡಿ ಪಟ್ಟಣವಾದ ನಿಪ್ಪಾಣಿ ವರೆಗೂ ಅವರನ್ನು ತಲುಪಿಸಿ ಹಿಂದಿರುಗಿದ್ದಾರೆ.

ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಕಪ್ಪು ಮಸಿ ಬಳಿದ ನಂತರ ಶಿವಸೇನೆ ಪ್ರತಿಭಟನೆ ನಡೆಸಿ ಕರ್ನಾಟಕ ವಾಹನಗಳ ಮೇಲೆ ದಾಳಿ ನಡೆಸಿತ್ತು. ಹೀಗಾಗಿ ಕರ್ನಾಟಕ ರಾಜ್ಯದ ಪೊಲೀಸರ ವಾಹನಕ್ಕೆ ಮಹಾರಾಷ್ಟ್ರ ಪೋಲೀಸರ ಭದ್ರತೆ ಒದಗಿಸಿದರು.

You might also like
Leave a comment