This is the title of the web page

ಕತ್ತೆಗೆ ಮಲ್ಲಿಕಾರ್ಜುನ ಗೌಡ, ಚಂದ್ರಶೇಖರಾವ ಫೋಟೋ ಹಾಕಿ ಬೃಹತ್ ಪ್ರತಿಭಟನೆ  

ಮುಧೋಳ, 4- ಬಾಬಾಸಾಹೇಬ ಅಂಬೇಡ್ಕರವರಿಗೆ ಅವಮಾನ ಮಾಡಿದ ಜಾತಿವಾದಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಅಮಾನತುಗೊಳಿಸಬೇಕು. ದೂರು ದಾಖಲಿಸಿ ಅವರನ್ನು ಬಂಧಿಸಬೇಕು, ಕಠಿಣ ಶಿಕ್ಷೆ ನೀಡಬೇಕು ಎಂದು ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷರಾದ ಲವಿತ್ ಮೇತ್ರಿ ಸರಕಾರವನ್ನು ಒತ್ತಾಯಿಸಿದರು.
ವಿಶ್ವ ರತ್ನ ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಅಗೌರವ ತೋರಿದ ಮಲ್ಲಿಕಾರ್ಜುನ ಗೌಡ ಹಾಗೂ ತೆಲಂಗಾಣ ಮುಖ್ಯ ಮಂತ್ರಿ ಚಂದ್ರಶೇಖರರಾವ ವಿರುದ್ಧ ವಿವಿಧ ದಲಿತ ಪರ, ಅಲ್ಪಸಂಖ್ಯಾತರ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕತ್ತೆಗೆ ಅವರ ಪೋಟೊ ಹಾಕಿ ಬೃಹತ್ ಪ್ರತಿಭಟನೆ   ಮಾಡಲಾಯಿತು.
ಅವರ ಪ್ರತಿಕೃತಿಗಳನ್ನು  ಅಂಬೇಡಕರ ಸರ್ಕಲನಲ್ಲಿ ದಹನ ಮಾಡಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮುಧೋಳ ತಹಸೀಲ್ದಾರವರ ಮೂಲಕ ರಾಜ್ಯ ಪಾಲರಿಗೆ ಮನವಿಯನ್ನು ನೀಡಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
You might also like
Leave a comment