This is the title of the web page

ಪತ್ನಿಗೆ ಮುತ್ತು ಕೊಟ್ಟಿದ್ದಕ್ಕೆ ಥಳಿಸಿದ ಜನರು 

 

ಅಯೋಧ್ಯೆ, ೨೩-: ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಯ ಗಲ್ಲಕ್ಕೆ ಚುಂಬಿಸಿದ ಪತಿಯನ್ನು ಜನ ಥಳಿಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನದಿಯಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಚೆಲ್ಲಾಟ ಆಡುತ್ತ ಪತ್ನಿಯ ಕೆನ್ನೆಗೆ ಮುತ್ತು ಕೊಟ್ಟನು. ಈ ವೇಳೆ ಇದೇ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕೆಲವರು ಆಕ್ಷೇಪಿಸಿದರು. ಕೆಲವರು ಪುರುಷನನ್ನು ಹೆಂಡತಿಯಿಂದ ಎಳೆದೊಯ್ದು ವ್ಯಕ್ತಿಯನ್ನು ಮನಬಂದಂತೆ ಥಳಿಸಿದ್ದಾರೆ. ಹೆಂಡತಿ ತನ್ನ ಗಂಡನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ, ವಿಫಲವಾಗಿದ್ದಾರೆ.

 

ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿಬರುತ್ತಿದೆ. ದಂಪತಿಗಳನ್ನು ನಂತರ ನೀರಿನಿಂದ ಹೊರಗೆ ಹಾಕಲಾಯಿತು.

ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.

You might also like
Leave a comment