This is the title of the web page

ತಂದೆ – ಮಗನ ಮೇಲೆ ಕಾಡಾನೆ ದಾಳಿ : ತಂದೆ ಸಾವು, ಮಗನ ಸ್ಥಿತಿ ಗಂಭೀರ 

ಗುಂಡ್ಲುಪೇಟೆ, ೧೬- ಬಂಡೀಪುರ ಗ್ರಾಮದ ತಮ್ಮ ಹೊಲದ ಬೆಳೆ ಕಾಯಲು ಹೋಗಿದ್ದ ತಂದೆ ಮಗನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತಂದೆ ಮೃತಪಟ್ಟಿದ್ದು, ಮಗ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ 55 ವರುಷದ ರೈತ ಬೆಳ್ಳಿಶೆಟ್ಟಿ ಆನೆ ದಾಳಿಯಿಂದ ಮೃತಪಟ್ಟವರು. ಇವರ ಮಗ ಮಹೇಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳೆ ಕಾಯಲು ಹಾಕಿದ್ದ ಗುಡಿಸಲಿನಲ್ಲಿ ರಾತ್ರಿ ಬೆಳ್ಳಿಶೆಟ್ಟಿ ಮಲಗಿದ್ದರು. ಈ ವೇಳೆ ಮಹೇಶ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿ ಜಮೀನಿಗೆ ನುಗ್ಗಿದ ಆನೆ ಮಲಗಿದ್ದವರ ಮೇಲೆ ದಾಳಿ ನಡೆಸಿದೆ‌.

ಮಹೇಶ ಭುಜಕ್ಕೆ ಗಂಭೀರ ಗಾಯಗಳಾಗಿವೆ.‌ ಆದರೂ ಆನೆಯಿಂದ ಮಹೇಶ​ ತಪ್ಪಿಸಿಕೊಂಡಿದ್ದಾರೆ. ನಂತರ ಗುಡಿಸಲಿನಲ್ಲಿದ್ದ ಬೆಳ್ಳಿಶೆಟ್ಟಿ ಅವರ ತಲೆಯನ್ನು ತುಳಿದು ಸಾಯಿಸಿದೆ.

ವಿಷಯ ತಿಳಿಯಿದ್ದು ಸ್ಥಳ ದೌಡಾಯಿಸಿದ ಹೊಯ್ಸಳ ಪೊಲೀಸರು ಮಹೇಶ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

 

You might also like
Leave a comment