Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

State News

ದಲಿತರ ಮನೆಯಲ್ಲಿ ಊಟ ; ಎಚ್ ವಿಶ್ವನಾಥ ಆಕ್ರೋಶ


ಬೆಂಗಳೂರು, ೨೨-

ದಲಿತರ ಮನೆಯಲ್ಲಿ ಊಟ ಮಾಡೋದು ಒಂದು ರೀತಿ ಫ್ಯಾಷನ್ ಆಗಿದೆ. ಇವರೇ ಊಟಕ್ಕೆ ಹೋಗಿ ಪರೋಕ್ಷವಾಗಿ ಅಸ್ಪಶ್ಯತೆ ಮುಂದುವರೆಸುತ್ತಿದ್ದಾರೆ ಎಂದು ತಮ್ಮದೇ ಪಕ್ಷದ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳು ನಡೆಸುತ್ತಿರುವ ದಲಿತ ಮನೆ ಭೇಟಿ ವಿಚಾರಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಆ ಮೂಲಕ ಸ್ವಪಕ್ಷ ಮುಖಂಡರ ನಡೆ ವಿಚಾರದಲ್ಲಿ ಮತ್ತೊಮ್ಮೆ ಬಹಿರಂಗ ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ‘ಜನಸಂಕಲ್ಪ’ ಯಾತ್ರೆ ವೇಳೆ ದಲಿತರ ಮನೆಯಲ್ಲಿ ಊಟ ಮಾಡಲು ಹೋಗುತ್ತಿದ್ದಾರೆ. ಆದರೆ, ಅವರ ನಡೆ-ನುಡಿಯಲ್ಲಿ ದಲಿತರ ಪರವಾದ ನಿಜ ಕಾಳಜಿ ಕಾಣುತ್ತಿಲ್ಲ. ಇದೊಂದು ರೀತಿ ಫ್ಯಾಷನ್ ಥರ ಕಾಣುತ್ತಿದೆ. ಇದರ ಜೊತೆಗೆ ಪರೋಕ್ಷವಾಗಿ ಈ ರಾಜಕಾರಣಿಗಳು ಮತ್ತೆ ಅಸ್ಪೃಶ್ಯತೆಯನ್ನು ಮುಂದುವರೆಸುತ್ತಿದ್ದಾರೆ” ಎಂದು ವಿಶ್ವನಾಥ ಕಿಡಿಕಾರಿದರು.

“ರಾಜಕಾರಣಿಗಳು ದಯಮಾಡಿ ಈ ನಾಟಕ ನಿಲ್ಲಿಸಬೇಕು. ಆ ಸಮುದಾಯಕ್ಕೆ ಅವಮಾನ ಮಾಡುವ ಕೆಲಸವನ್ನು ದಯಮಾಡಿ ಮಾಡಬೇಡಿ” ಎಂದು ವಿಶ್ವನಾಥ, “ದಲಿತರ ಮನೆಗಳಿಗೆ ಅವರೇ ಕರೆದಾಗ ಹೋಗಿ ಅವರ ಆತಿಥ್ಯ ಸ್ವೀಕರಿಸಿದರೆ ನಿಮ್ಮ ಸಾಮಾಜಿಕ ಬದ್ಧತೆಯನನ್ನು ಒಪ್ಪಿಕೊಳ್ಳಬಹುದು. ಇಲ್ಲಿ ನೀವಾಗಿಯೇ ಹೋಗಿ ತಿಂಡಿ ಊಟ ಮಾಡುತ್ತಿದ್ದೀರಾ. ಅದೂ ಸಾಲದು ಎನ್ನುವಂತೆ ನಿಮ್ಮದೇ ತಟ್ಟೆ, ನಿಮ್ಮದೇ ಊಟ ತೆಗೆದುಕೊಂಡು ಹೋಗಿ ಅವರ ಮನೆಯಲ್ಲಿ ಊಟ ಮಾಡಿ ಬರುವುದು ಎಷ್ಟು ಸರಿ?. ನಾಚಿಕೆಯಾಗಬೇಕು ನಿಮ್ಮ ಬೂಟಾಟಿಕೆಗೆ. ಥೂ….ಛೀ….” ಎಂದು ವಿಶ್ವನಾಥ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

“ನಿಮಗೆ ದಲಿತರ ಪರ ನಿಜ ಕಾಳಜಿ, ಕಳಕಳಿ ಇದ್ದರೆ ಅವರ ಮನೆಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಹೋಗಿ. ಅದನ್ನು ಬಿಟ್ಟು ಹೋಟೆಲ್ ಊಟ ತಿನ್ನಲು ಅಲ್ಲಿಗೆ ಹೋಗಬೇಕಾ” ಎಂದ ವಿಶ್ವನಾಥ, “ಈ ಕೆಲಸವನ್ನು ಯಾರೇ ಮಾಡಿದರೂ ನಾನು ಖಂಡಿಸುತ್ತೇನೆ” ಎಂದರು.

ಇದೇ ವೇಳೆ ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ ವಿಶ್ವನಾಥ, “ಅವರು ಬಿಡಿ ಡೊಡ್ಡವರು, ಮೈಸೂರು ಮಹಾರಾಜರಿಗಿಂತಲೂ ದೊಡ್ಡವರು, ಅವರಿಗಿಂತಲೂ ಹೆಚ್ಚಿನ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಏನು ಮಾತಾಡೋಕಾಗುತ್ತೆ ಬಿಡಿ” ಎಂದು ಹೇಳಿದರು.


Leave a Reply