Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಡೆಂಗಿ ರೋಗಿಗೆ ರಕ್ತದ ಬದಲಿಗೆ ಮೋಸಂಬಿ ಹಣ್ಣಿನ ಜ್ಯೂಸ್ ಹಾಕಿದ ಸಿಬ್ಬಂದಿ; ರೋಗಿಯ ಸಾವು


ಲಖನೌ : ಡೆಂಗಿ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ ಬದಲಿಗೆ ಮೋಸಂಬಿ ಹಣ್ಣಿನ ಜ್ಯೂಸ್ ಡ್ರಿಪ್ ಅನ್ನು ದೇಹಕ್ಕೆ ಹಾಕಲಾಗಿದ ಆಘಾತಕಾರಿ ಘಟನೆ ನಡೆದಿದ್ದು ರೋಗಿ ಸಾವನ್ನಪ್ಪಿದ್ದಾರೆ.

ಘಟನೆ ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. 32 ವರ್ಷದ ಪ್ರದೀಪ ಪಾಂಡೆಯನ್ನು ಅಕ್ಟೋಬರ 17 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಪ್ರಯಾಗರಾಜ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು.

ಆತನ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಕುಟುಂಬ ಆರೋಪಿಸಿದ ನಂತರ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ ಪಾಠಕ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಂತರ ಈಗ ಅಕ್ರಮ ಬಯಲಾಗಿದೆ.

ರಕ್ತದ ಪ್ಯಾಕ್‌ನಲ್ಲಿ ಮೋಸಂಬಿ ರಸವನ್ನು ತೋರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗುತ್ತಿದೆ. ಘಟನೆಯು ಆಕ್ರೋಶವನ್ನು ಉಂಟುಮಾಡಿದ್ದು, ಘಟನೆ ನಡೆದ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಅನ್ನು ಮುಚ್ಚಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಆದೇಶಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಪಾಠಕ, ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲಿಗೆ ಸಿಹಿ ನಿಂಬೆ ರಸವನ್ನು ತುಂಬಿಸಿದ ವೈರಲ್ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಲಾಗಿದೆ ಮತ್ತು ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.


A B Dharwadkar
the authorA B Dharwadkar

Leave a Reply