This is the title of the web page

ಗ್ಯಾಸ ಗೀಜರ್ ಸೋರಿಕೆಯಿಂದ ತಾಯಿ-ಮಗಳ ಸಾವು

ಬೆಂಗಳೂರು, 17- 35 ವರ್ಷದ ಮಹಿಳೆ ಮತ್ತು ಆಕೆಯ ಏಳು ವರ್ಷದ ಮಗಳು ಅವರ ಮನೆಯ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಬೆಂಗಳೂರಿನ ಚಿಕ್ಕಬಾಣಾವರ ಸಮೀಪದ ಗಣಪತಿನಗರದಲ್ಲಿ ಶನಿವಾರ ಈ ಘಟನೆ ನಡೆದಿದೆ.

1ನೇ ತರಗತಿ ವಿದ್ಯಾರ್ಥಿನಿ ಗೌತಮಿ ಮತ್ತು ಆಕೆಯ ತಾಯಿ ಮಂಗಳಾ (35) ಮತ್ತು ಗ್ಯಾಸ್ ಗೀಜರ್ ‌ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಜೆ 4 ಗಂಟೆಗೆ ಘಟನೆ ಬೆಳಕಿಗೆ ಬಂದಿದೆ. ನರಸಿಂಹಮೂರ್ತಿ ಎಂಬುವರು ಫ್ಯಾಬ್ರಿಕೇಶನ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ಮಗಳೊಂದಿಗೆ ಗಣಪತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲಸದ ನಿಮಿತ್ತ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಆತ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ನಿಗೆ ಕರೆ ಮಾಡಿದ್ದ. ಅವಳು ಅವನ ಕರೆಯನ್ನು ತೆಗೆದುಕೊಂಡಿಲ್ಲ. ಆತ ಅನೇಕ ಬಾರಿ ಕರೆ ಮಾಡುವ ಮೂಲಕ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಫೋನ್ ತೆಗೆದುಕೊಳ್ಳದ ಕಾರಣ ಏನೋ ತಪ್ಪಾಗಿದೆ ಎಂದು ಶಂಕಿಸಿ ತನ್ನ ಮನೆ ಮಾಲೀಕರಿಗೆ ಈ ವಿಷಯ ತಿಳಿಸಿದ್ದಾನೆ.

ಮನೆಯ ಮಾಲೀಕರು ಬಂದು ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಕಿಟಕಿಯ ಮೂಲಕ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಸ್ನಾನದ ಕೋಣೆ ಮುಚ್ಚಿರುವುದನ್ನು ಕಂಡು ಪದೇ ಪದೇ ಬಾಗಿಲು ಬಡಿದಿದ್ದಾರೆ. ಆದರೆ ಒಳಗಡೆಯಿಂದ ಯಾವುದೇ ಉತ್ತರ ಬಂದಿಲ್ಲ. ನಂತರ ನರಸಿಂಹಮೂರ್ತಿ ಹಾಗೂ ಪೊಲೀಸರಿಗೆ ಆತ ಮಾಹಿತಿ ನೀಡಿದ್ದಾರೆ.

ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ನಾನದ ಕೋಣೆಯ ಬಾಗಿಲು ಮುರಿದು ನೋಡಿದಾಗ ತಾಯಿ ಮಂಗಳಾ ಮತ್ತು ಮಗಳು ಗೌತಮಿ ಇಬ್ಬರೂ ಶವವಾಗಿ ಬಿದ್ದಿದ್ದರು.

ಬೆಳಿಗ್ಗೆ 11 ಗಂಟೆಗೆ ಇಬ್ಬರೂ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿರಬಹುದು. ಸ್ನಾನ ಮಾಡುವಾಗ ಕಿಟಕಿಗಳನ್ನು ಮುಚ್ಚಿದ್ದರು. ಬಾತ್‌ರೂಮ್‌ನಲ್ಲಿನ ಗುಣಮಟ್ಟವಿಲ್ಲದ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ಕಾರ್ಬನ್ ಮೋನಾಕ್ಸೈಡ್ ಸೇವಿಸಿದ ನಂತರ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ನಾವು ಶಂಕಿಸಿದ್ದೇವೆ ಎಂದು ಪೋಲೀಸರು ತಿಳಿಸಿದ್ದಾರೆ.

ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದು ನಿಖರ ಕಾರಣ ತಿಳಿಯಲು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

You might also like
Leave a comment