This is the title of the web page

ಕಿಮ್ಸನಲ್ಲಿ ಮಗು ಕಳ್ಳತನಕ್ಕೆ ಟ್ವಿಸ್ಟ್ : ಪ್ರಕರಣದಲ್ಲಿ ತಾಯಿಯೇ ವಿಲನ್

ಹುಬ್ಬಳ್ಳಿ, ೧೬- ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಮತ್ತೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕಿಮ್ಸ್ ನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ, ತನ್ನ ಕೈಯಿಂದ ಕೂಸನ್ನು ಅಪರಿಚಿತರು ಕಸಿದುಕೊಂಡು ಹೋಗಿದ್ದರೆಂದು ದೂರಿದ್ದ ತಾಯಿಯೇ ಮಗುವನ್ನು ಚರಂಡಿ ಪಕ್ಕ ಬಿಟ್ಟು ಬಂದಿದ್ದಳೆಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕಳೆದ ಸೋಮವಾರ ಯಾರೋ ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆಂದು ತಾಯಿ ಸಲ್ಮಾ ಶೇಖ್ ಠಾಣೆಗೆ ದೂರು ನೀಡಿದ್ದಳು.

ಮಂಗಳವಾರ ಮುಂಜಾನೆ ಕಿಮ್ಸ್ ಹಿಂಭಾಗದ ಚರಂಡಿ ಗೋಡೆಯ ಮೇಲೆ ಪತ್ತೆಯಾಗಿತ್ತು. ಆದ್ರೆ ಪೊಲೀಸ್ ತನಿಖೆಯಲ್ಲಿ ಮಗು ಕಳ್ಳತನದ ಅಸಲಿಯತ್ತು ಬಯಲಾಗಿದ್ದು, ಅನಾರೋಗ್ಯ ಹೊಂದಿದ್ದ ಮಗುವನ್ನು ತಾಯಿಯೇ ಎಸೆದಿದ್ದು ಬೆಳಕಿಗೆ ಬಂದಿದೆ.

ಹೌದು ಶೌಚಾಲಯಕ್ಕೆ ಹೋಗಿ ಬರುವ ನೆಪದಲ್ಲಿ ಮಗುವನ್ನು ತಂದು ಮಗು ಎಸೆದು ಡ್ರಾಮಾ ಮಾಡಿದ್ದಳು. ಸಿಸಿಟಿವಿಯಲ್ಲಿ ತಾಯಿ ಸಲ್ಮಾ ಮಗು ಎಸದಿರುವುದು ಕಂಡು ಬಂದಿದೆ.

ತನಗೆ ಹುಟ್ಟಿದ ಮಗುವಿನ ತಲೆ ದೊಡ್ಡದಿದೆ ಎಂದು ಶೌಚಾಲಯದ ಪಕ್ಕದ ಕಿಡಕಿಯಿಂದ ಹೊರಗೆ ಚರಂಡಿ ಕಡೆ ಎಸೆದಿದ್ದಾಳೆ. ಅದೃಷ್ಟವಶಾತ್ ಮಗು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ.

ಪೋಷಕರ ಹೇಳಿಕೆ ಮೇರೆಗೆ ಪೊಲೀಸರು ತಾಯಿ ಹಾಗೂ ಮಗುವಿನ ಚಿಕಿತ್ಸೆಗೆ ಕಿಮ್ಸ್ ನಲ್ಲಿ ಅನುವು ಮಾಡಿಕೊಟ್ಟಿದ್ದಾರೆ.

You might also like
Leave a comment