This is the title of the web page

ಆರ್ಚಕನ ಜೊತೆ ಓಡಿ ಹೋದ ಎರಡು ಮಕ್ಕಳ ತಾಯಿ : ಕಾಡಲ್ಲಿ ಬಿಟ್ಟು ಆರ್ಚಕ ಪರಾರಿ 

 

ಮೈಸೂರು‌: ಮದುವೆಯಾಗಿ ಎರಡು ಮಕ್ಕಳಿದ್ದರೂ ದೇವಸ್ಥಾನದ ಅರ್ಚಕನ ಜೊತೆ ಹತ್ತು ದಿನಗಳ ಹಿಂದೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ.

೨೧ ವರ್ಷದ  ಅರ್ಚಕ ಸಂತೋಷ ಜೊತೆ ಪರಾರಿಯಾಗಿದ್ದ ಎರಡು ಮಕ್ಕಳ ತಾಯಿ ಈಗ ಅತಂತ್ರಳಾಗಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದು ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

೩೫ ವರ್ಷದ ಗೃಹಿಣಿಯು ಕಳೆದ ಜೂ. ೧೨ರಂದು ತಂದೆ ಮನೆಯಿಂದ ನಾಪತ್ತೆಯಾಗಿದ್ದು,ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಗೃಹಿಣಿ ಪತ್ತೆಯಾಗಿದ್ದಾಳೆ.

ಮಹಿಳೆ ಮಹದೇಶ್ವರನ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ೨೧ ವರ್ಷದ ಅರ್ಚಕ ಸಂತೋಷನ ಪರಿಚಯವಾಗಿದ್ದಾನೆ. ಬಳಿಕ ಗೃಹಿಣಿಯ ಜೊತೆಗೆ ಸಲುಗೆ ಬೆಳೆಸಿದ್ದಾನೆ. ನಿನಗೆ ಹೊಸ ಬಾಳು ಕೊಡುತ್ತೇನೆಂದು ನಂಬಿಸಿದ ಸಂತೋಷ, ಗೃಹಿಣಿಯನ್ನು ತನ್ನ ಜೊತೆ ಕರೆದೊಯ್ದಿದ್ದಾನೆ. ಹತ್ತು ದಿನಗಳ ಕಾಲ ಆಕೆಯೊಂದಿಗೆ ತಿರುಗಾಡಿ, ನಂತರ ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆತಂದಿದ್ದಾನೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಸಂತೋಷ ನಾಪತ್ತೆಯಾಗಿದ್ದಾನೆ.

ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದ ಗೃಹಿಣಿ, ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾಳೆ. ಗೃಹಿಣಿಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಗೃಹಿಣಿಗೆ ರಕ್ಷಣೆ ನೀಡಿದ್ದಾರೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಪೂಜಾರಿ ಸಂತೋಷ ಇದೀಗ ನಾಪತ್ತೆಯಾಗಿದ್ದಾನೆ. ಇತ್ತ ಗಂಡನ ಮನೆಯೂ ಇಲ್ಲ, ಬಾಳು ಕೊಡುವುದಾಗಿ ನಂಬಿಸಿದ ಸಂತೋಷ ಸಹ ಇಲ್ಲದೇ ಗೃಹಿಣಿ ಅತಂತ್ರಕ್ಕೆ ಸಿಲುಕಿದ್ದಾಳೆ. ಆದರೆ ತಾನು ಅರ್ಚಕ ಸಂತೋಷ ಜೊತೆಯೇ ಇರುವುದಾಗಿ ಗೃಹಿಣಿ ಪಟ್ಟು ಹಿಡಿದಿದ್ದಾಳೆ.

ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You might also like
Leave a comment