This is the title of the web page

ತಾಯಿ,ಮಗಳು ನಾಪತ್ತೆ

ಬೆಳಗಾವಿ,ಫೆ.01-: ಬೆಳಗಾವಿಯ ಅನಗೋಳದ ಕುರುಬರ ಗಲ್ಲಿಯ ಮನೆ ನಂ.617ರ ನಿವಾಸಿಯಾದ ರಾಜು ಮಲ್ಲಾರಿ ಕರೆಗಾರ ಅವರ ಹೆಂಡತಿಯಾದ 36 ವರ್ಷದ ವಿಜಯಲಕ್ಷ್ಮೀ ರಾಜು ಕರೆಗಾರ ಮತ್ತು ಮಗಳಾದ 17 ವರ್ಷದ ರಿಯಾ ರಾಜು ಕರೆಗಾರ ನಾಪತ್ತೆಯಾಗಿದ್ದಾರೆ.

ಜನವರಿ 27ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೇಂಟ್ ಜೋಸೆಫ್ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ. ನಂತರ ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಬೆಳಗಾವಿ ತಿಲಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾದವರ ಚಹರೆಪಟ್ಟಿ: ತಾಯಿ ವಿಜಯಲಕ್ಷ್ಮೀ 5.2 ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ಗುಲಾಬಿ ಬಣ್ಣದ ಸೀರೆ ಧರಿಸಿದ್ದು, ಕನ್ನಡ, ಹಿಂದಿ, ಮರಾಠಿ ಮಾತನಾಡುತ್ತಾಳೆ. ಮತ್ತು ಮಗಳಾದ ರಿಯಾ ಕರೆಗಾರ 5.0 ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ತಿಳಿ ನೀಲಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ.

ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ತಿಲಕವಾಡಿ ಠಾಣೆ ದೂರವಾಣಿ ಸಂಖ್ಯೆ : 0831-2405236, ಪೊಲೀಸ್ ಇನ್ಸಪೆಕ್ಟರ ತಿಲಕವಾಡಿ 9480804052, ಪಿ.ಎಸ್.ಐ(ಕಾ ಮತ್ತು ಸು) ತಿಲಕವಾಡಿ 9480804112 ಅವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಿಲಕವಾಡಿ  ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You might also like
Leave a comment