This is the title of the web page

ಮರು ತಪಾಸಣೆಯಲ್ಲಿ ೬೨೫ ಅಂಕ ಪಡೆದ ಮೂಡಲಗಿ ವಿದ್ಯಾರ್ಥಿನಿ

 

ಬೆಳಗಾವಿ, ೯- ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದಿದ್ದ ಮೂಡಲಗಿ ಶೈಕ್ಷಣಿಕ ವಲಯದ ವಿದ್ಯಾರ್ಥಿನಿ ಉತ್ತರ ಪತ್ರಿಕೆಗಳ ಮರು ತಪಾಸಣೆಯಲ್ಲಿ ಎರಡು ಅಂಕ ಹೆಚ್ಚು ಪಡೆದು ರಾಜ್ಯದ ಟಾಪರ್ ಗಳಲ್ಲೊಬ್ಬರಾಗಿದ್ದಾಳೆ.

ಮೂಡಲಗಿ ತಾಲೂಕಿನ ಕೌಜಲಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮಿ ತಳವಾರ ಗಣಿತ ಹಾಗು ವಿಜ್ಞಾನ ವಿಷಯಗಳಲ್ಲಿ 100ಕ್ಕೆ 99 ಅಂಕ ಹಾಗು ಉಳಿದ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದರು. ಗಣಿತ, ವಿಜ್ಞಾನ ಪರೀಕ್ಷೆಗಳಲ್ಲೂ ಚೆನ್ನಾಗಿ ಬರೆದಿದ್ದ ಮಹಾಲಕ್ಷ್ಮಿ ಆ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯುವ ವಿಶ್ವಾಸಹೊಂದಿ ಉತ್ತರ ಪತ್ರಿಕೆಗಳ ಮರು ತಪಾಸಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರು ರಾಜ್ಯದ 2021-22ರ ಟಾಪರ್ ಗಳಲೊಬ್ಬರಾಗಿದ್ದಾರೆಂದು ಮೂಡಲಗಿ ಬಿಇಓ ಅಜಿತ ಮಣ್ಣಿಕೇರಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮಹಾಲಕ್ಷ್ಮಿಯ ಸಾಧನೆಗೆ ಅವರ ಆತ್ಮವಿಶ್ವಾಸಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಸುಭಾಷ ಒಲ್ಲಾಪುರ ಅಭಿನಂದನೆ ತಿಳಿಸಿದ್ದಾರೆ.

You might also like
Leave a comment