LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ನಿಂತ ಜನರ ಮೇಲೆ ಕುಡಿದು ಟ್ರಕ್ ಹಾಯಿಸಿದ ಚಾಲಕ : 7 ಮಕ್ಕಳು ಸೇರಿ 15 ಜನ ಸ್ಥಳದಲ್ಲೇ ಸಾವು

ಪಾಟ್ನಾ: ಟ್ರಕ್ ವೊಂದು ಜನರ ಮೇಲೆ ಹರಿದ ಕಾರಣ 15 ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಮೆಹನಾರದಲ್ಲಿ ನಡೆದಿದೆ. ಘಟನೆಯಲ್ಲಿ 7 ಮಕ್ಕಳು ಸೇರಿ 15 ಜನ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಉಪವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ.



ವೇಗವಾಗಿ ಬಂದ ಟ್ರಕ್, ಮಕ್ಕಳ ಸಹಿತ ಹಲವರ ಮೇಲೆ ಹರಿದಿದೆ. ಭೂಯಾನ್ ಬಾಬಾರವರ ಪೂಜೆ ಹಿನ್ನೆಲೆ ಔತಣಕೂಟ ಮುಗಿಸಿ ಎಲ್ಲರೂ ಹಿಂತಿರುಗುತ್ತಿದ್ದರು. ಈ ವೇಳೆ ಪೀಪಲ್ ಟ್ರೀ ಬಳಿ ನಿಂತಿದ್ದ ಜನರ ಮೇಲೆ ಟ್ರಕ್ ಹರಿದಿದೆ.



ಟ್ರಕ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಜನರು ಟ್ರಕ್ ಚಾಲಕನ ವಿರುದ್ಧ ಕೆರಳಿದ ಪರಿಣಾಮ ಭಯಕ್ಕೆ ಟ್ರಕ್ ಚಾಲಕ ಟ್ರಕ್​ನಲ್ಲೇ ಕುಳಿತುಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಚಾಲಕನನ್ನು ವಶಕ್ಕೆ ಪಡೆದಿದ್ದರೂ ಜನರ ಆಕ್ರೋಶ ಕಡಿಮೆಯಾಗಿಲ್ಲ.



ಘಟನೆಯ ನಂತರ ಮೃತ ದೇಹಗಳು ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳಕ್ಕೆ ದೌಡಾಯಿಸಿದ ಸಂಬಂಧಿಕರು ಮೃತದೇಹಗಳನ್ನು ನೋಡಿ ಕಣ್ಣೀರು ಸುರಿಸಿದ್ದಾರೆ.



ಮಧ್ಯರಾತ್ರಿ ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ರವಾನಿಸಲಾಯಿತು. ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಹಾಜಿಪುರ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗರ ಪಂಚಮಿ ದಿನವೇ ಹಾವು ಕಡಿತಕ್ಕೆ ಮಹಿಳೆ ಬಲಿಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆ