LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಇರಾನ್ ಯುದ್ಧದಲ್ಲಿ 42 ಯುದ್ಧ ವಿಮಾನ ಧ್ವಂಸ: ಅಮೆರಿಕಕ್ಕೆ ₹2.4 ಲಕ್ಷ ಕೋಟಿ ಹಾನಿ

ವಾಷಿಂಗ್ಟನ್, ಮೇ 20 : ಇರಾನ್ ಯುದ್ಧದ ವೇಳೆ ಅಮೆರಿಕದ ಅತ್ಯಾಧುನಿಕ ಡ್ರೋನ್ ಸೇರಿ ಒಟ್ಟು 42 ಯುದ್ಧ ವಿಮಾನಗಳು ಹಾನಿಗೊಳಗಾಗಿವೆ ಅಥವಾ ಧ್ವಂಸಗೊಂಡಿವೆ ಎಂದು ಅಮೆರಿಕದ ಕಾಂಗ್ರೆಸ್ ರಿಸರ್ಚ್ ಸರ್ವಿಸ್ ತಿಳಿಸಿದೆ.

ರಕ್ಷಣಾ ಇಲಾಖೆ ಹಾಗೂ ಯುಎಸ್ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಗಳು ಮತ್ತು ವಿವಿಧ ಮಾಧ್ಯಮ ವರದಿಗಳನ್ನು ಆಧರಿಸಿ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹಾನಿಗೊಳಗಾದ ಅಥವಾ ನಾಶವಾದ ವಿಮಾನಗಳ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಬದಲಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಟ್ರೈಕ್ ಈಗಲ್, ಥಂಡರ್‌ಬೋಲ್ಟ್, ಜಾಲಿ ಗ್ರೀನ್, ಟ್ರೈಟಾನ್, ಎಂಕ್ಯೂ-9 ರೀಪರ್ ಹಾಗೂ ಎಂಕ್ಯೂ-4ಸಿ ಮಾದರಿಯ ಶಕ್ತಿಶಾಲಿ ಮತ್ತು ದುಬಾರಿ ಡ್ರೋನ್‌ಗಳು ಯುದ್ಧದಲ್ಲಿ ನಾಶವಾಗಿವೆ ಎಂದು ತಿಳಿಸಲಾಗಿದೆ.

ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಇದುವರೆಗೆ ಸುಮಾರು ₹2.4 ಲಕ್ಷ ಕೋಟಿ ವೆಚ್ಚ ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ರಿಸರ್ಚ್ ಸರ್ವಿಸ್ ಹೇಳಿದೆ.

ಯುದ್ಧದಲ್ಲಿ ಹಾನಿಗೊಳಗಾದ ಮಿಲಿಟರಿ ಉಪಕರಣಗಳ ದುರಸ್ತಿ ಹಾಗೂ ಹೊಸ ಉಪಕರಣಗಳ ಖರೀದಿಗೆ ಹೆಚ್ಚಿನ ವೆಚ್ಚವಾಗುತ್ತಿರುವುದರಿಂದ ಒಟ್ಟಾರೆ ಯುದ್ಧದ ಬಜೆಟ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST