LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಕಾಡಿಗೆ ಬೆಂಕಿ; ದೇವಸ್ಥಾನಕ್ಕೆ ಹೊರಟಿದ್ದ ಓರ್ವ ಸಜೀವ ದಹನ, ೫ ಜನರಿಗೆ ಗಾಯ

ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಬಳಿ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬೆಂಕಿ ಬಿದ್ದು ಬೆಟ್ಟ ಹತ್ತುತ್ತಿದ್ದ ವ್ಯಕ್ತಿಯೊಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ.



ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಬಳಿಯ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಘಟನೆ ನಡೆದಿದ್ದು, ರವಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಮೃತರನ್ನು ಬೆಂಗಳೂರಿನ ಅನಂತಕುಮಾರ (55) ಎಂದು ಗುರುತಿಸಲಾಗಿದೆ.



ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬೆಟ್ಟದಲ್ಲಿ ಬೆಳೆದ ಹುಲ್ಲುಗಾವಲಿಗೆ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿದ ನಂತರ ಗಾಳಿಗೆ ಬೆಂಕಿ ವೇಗವಾಗಿ ಹರಡಿಕೊಂಡಿದೆ. ಅದೇ ಸಮಯದಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಆರು ಜನರು ಬೆಟ್ಟವನ್ನು ಹತ್ತುತ್ತಿದ್ದಾಗ ಬೆಂಕಿ ವ್ಯಾಪಿಸಿದೆ. ಉಳಿದ ಐವರು ಪಾದಯಾತ್ರಿಗಳು ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಸ್ವಲ್ಪ ದಪ್ಪಗಿದ್ದ ಅನಂತಕುಮಾರ ಅವರು ಓಡಲಾಗದೇ ಬೆಂಕಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ.



ಉಳಿದ ಐವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಹೊನ್ನವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಸಪೆಕ್ಟರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ: ಅಶೋಕ, ಯದುವೀರ್ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆಗೌರಿ-ಗಣೇಶೋತ್ಸವಕ್ಕೆ ಹಾವೇರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತಆರೆಸ್ಸೆಸ್ ನೂರು ಸಲ ಹುಟ್ಟಿದರೂ ಬಹುತ್ವ ನಾಶವಾಗದು : ಬಿ.ಕೆ. ಹರಿಪ್ರಸಾದ2029ರೊಳಗೆ ಎನ್‌ಡಿಎ ಆಡಳಿತದ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಅಮಿತ ಶಾಯೋಗಿಗೆ ಪ್ರಶ್ನೆ ಕೇಳಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವಗೆ ಬೆದರಿಕೆಬೆದರಿಕೆಗೆ ಬಗ್ಗುವುದಿಲ್ಲ, ಇರಾನ್ ಶರಣಾಗುವುದಿಲ್ಲ: ಪೆಜೆಶ್ಕಿಯನ್ಗಣೇಶ ಮೆರವಣಿಗೆಯಲ್ಲಿ ಅಸಭ್ಯ ವರ್ತನೆ: ಪೊಲೀಸರಿಂದ ಲಾಠಿ ಪ್ರಹಾರಮನೆ ಬಾಗಿಲಿಗೇ ಜನನ, ಮರಣ ಪ್ರಮಾಣಪತ್ರಬ್ರಿಕ್ಸ್ ಯಾರ ವಿರುದ್ಧವೂ ಅಲ್ಲ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವೇದಿಕೆ: ಮೋದಿಭದ್ರತಾ ಮಂಡಳಿ ಸುಧಾರಣೆಗೆ ಕಾಲಮಿತಿ ನಿಗದಿಯಾಗಲಿ: ಮೋದಿ