LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮತಾಂತರ, ಅಂತರ್ ಧರ್ಮೀಯ ವಿವಾಹ ನಿಯಂತ್ರಿಸುವ ಕಾನೂನುಗಳ ಬಗ್ಗೆ ಜ.೨ರಂದು ಸುಪ್ರೀಮ ಕೋರ್ಟನಲ್ಲಿ ವಿಚಾರಣೆ

ಹೊಸದಿಲ್ಲಿ: ಅಂತರ್ಧರ್ಮೀಯ ವಿವಾಹದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ರಾಜ್ಯ ಸರ್ಕಾರಗಳ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಮ ಕೋರ್ಟ ಜನವರಿ 2 ರಂದು ವಿಚಾರಣೆಗೆ ಒಳಪಡಿಸಲಿದ್ದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಪೀಠವು ನ್ಯಾಯಾಲಯಗಳ ಪುನರಾರಂಭದ ಪ್ರಕರಣದ ವಿಚಾರಣೆ ನಡೆಸಲಿದೆ.



ಕೆಲವು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು(ಪಿಐಎಲ್) ಸಲ್ಲಿಸಲಾಗಿದ್ದು ಕೆಲವು ಅರ್ಜಿಗಳನ್ನು ವಕೀಲರಾದ ವಿಶಾಲ ಠಾಕ್ರೆ, ಎ.ಎಸ್. ಯಾದವ, ಸಂಶೋಧಕ ಪ್ರಣ್ವೇಶ ಮತ್ತು ‘ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು’ ಎನ್‌ಜಿಒ ಸಲ್ಲಿಸಿದ್ದಾರೆ.



ಜನವರಿ 6, 2021 ರಂದು ಸುಪ್ರೀಮ ಕೋರ್ಟ, ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಒಪ್ಪಿಕೊಂಡಿತು.



ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ವಿವಾಹದ ಮೂಲಕ ಧಾರ್ಮಿಕ ಮತಾಂತರವನ್ನು ಅಪರಾಧೀಕರಿಸುವುದು ಮತ್ತು ಇನ್ನೊಂದು ಧರ್ಮದವರೊಂದಿಗೆ ಮದುವೆಯಾಗುವ ಮೊದಲು ಅಧಿಕೃತ ಅನುಮತಿಯನ್ನು ಕಡ್ಡಾಯಗೊಳಿಸುವುದನ್ನು ಜಾರಿ ಮಾಡಿವೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ