LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

2 ವರ್ಷಗಳ ಹಿಂದೆ ಕೋವಿಡ್ ನಿಂದ ಸತ್ತಿದ್ದ ವ್ಯಕ್ತಿ ಮನೆಗೆ ಮರಳಿದ!

ಧಾರ್ (ಮಧ್ಯಪ್ರದೇಶ) : ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ ಮೃತ ಎಂದು ಘೋಷಿಸಿದ್ದ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರು ಆತನ ಅಂತ್ಯಕ್ರಿಯೆ ನೆರವೇರಿಸಿದ ಎರಡು ವರ್ಷಗಳ ನಂತರ ಆತ ಮನೆಗೆ ಮರಳಿದ ವಿಸ್ಮಯಕರ ಘಟನೆ ನಡೆದಿದೆ.



ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು 35 ವರುಷದ ಕಮಲೇಶ ಪಾಟಿದಾರ್ ಎಂಬ ವ್ಯಕ್ತಿ ತಮ್ಮ ಕುಟುಂಬವರು ತಮ್ಮ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಸುಮಾರು ಎರಡು ವರ್ಷಗಳ ನಂತರ ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರೋಡ್ಕಳ ಗ್ರಾಮದ ತನ್ನ ತಾಯಿಯ ಚಿಕ್ಕಮ್ಮನ ಮನೆಯ ಬಾಗಿಲು ಮುಂದೆ ಪ್ರತ್ಯಕ್ಷವಾಗಿದ್ದಾನೆ. ಆತ ತಟ್ಟಿದಾಗ ಕುಟುಂಬ ಸದಸ್ಯರು ಆಶ್ಚರ್ಯಚಕಿತರಾದರು.



ಕಮಲೇಶ ಪಾಟಿದಾರ್ ಎರಡನೇ ಕೋವಿಡ್‌ ಅಲೆಯ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆಸ್ಪತ್ರೆಯು ದೇಹವನ್ನು ಅವರಿಗೆ ಹಸ್ತಾಂತರಿಸಿದ ನಂತರ, ಕುಟುಂಬ ಸದಸ್ಯರು ಮೃತದೇಹದ ಅಂತ್ಯಕ್ರಿಯೆ ನಡೆಸಿದರು ಎಂದು ಅವರ ಸೋದರ ಸಂಬಂಧಿ ಮುಖೇಶ ಪಾಟಿದಾರ ತಿಳಿಸಿದ್ದಾರೆ.



ಈಗ, ಅವರು ಮನೆಗೆ ಮರಳಿದ್ದಾರೆ ಆದರೆ ಅವರು ಎರಡು ವರ್ಷಗಳ ಕಾಲ ಎಲ್ಲಿ ಉಳಿದುಕೊಂಡಿದ್ದರು ಎಂಬುದರ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ ಎಂದು ಮುಖೇಶ ಪಾಟಿದಾರ ಹೇಳಿದರು.



ಕುಟುಂಬ ಸದಸ್ಯರ ಪ್ರಕಾರ, ಕಮಲೇಶ ಪಾಟಿದಾರ್ ಅವರು 2021 ರಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು ಮತ್ತು ವಡೋದರಾ (ಗುಜರಾತ್) ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕಾನ್ವಾನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ಸಿಂಗ್ ರಾಥೋಡ್ ಹೇಳಿದ್ದಾರೆ.



ಅವರು ಕೋವಿಡ್‌-19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು, ನಂತರ ಕುಟುಂಬ ಸದಸ್ಯರು ವಡೋದರಾದಲ್ಲಿ ಆಸ್ಪತ್ರೆ ನೀಡಿದ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದರು ಮತ್ತು ನಂತರ ತಮ್ಮ ಗ್ರಾಮಕ್ಕೆ ಮರಳಿದರು ಎಂದು ಅವರು ಹೇಳಿದ್ದಾರೆ. ಶನಿವಾರ ಕಮಲೇಶ ಪಾಟಿದಾರ ಮನೆಗೆ ಹಿಂದಿರುಗಿದಾಗಲೇ ಅವರು ಬದುಕಿರುವುದು ಕುಟುಂಬ ಸದಸ್ಯರಿಗೆ ಗೊತ್ತಾಯಿತು ಎಂದು ರಾಥೋಡ್ ಹೇಳಿದರು.



ಕಮಲೇಶ ಪಾಟಿದಾರ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ವಿಷಯ ಇನ್ನಷ್ಟು ಸ್ಪಷ್ಟವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತೀಶ ಜಾರಕಿಹೊಳಿ, ಆಪ್ತರ ಮನೆಗಳಲ್ಲಿ ಇಡಿ ಶೋಧ ಅಂತ್ಯಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಿ ಹೆಬ್ಬಾಳಕರಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲಮತ್ತೆ ಗಾಯಗೊಂಡ ಹರ್ಷಿತ ರಾಣಾ: ಅಫ್ಘಾನಿಸ್ತಾನ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹೊರಕ್ಕೆಎಸ್‌ಐಆರ್‌ ಅಚ್ಚರಿ: ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!14 ವರ್ಷದ ನಿಶುಗೆ ಅತ್ಯಾಚಾರ ಬೆದರಿಕೆ: ತಕ್ಷಣ ರಕ್ಷಣೆಗೆ ಸುಪ್ರೀಂ ಕೋರ್ಟ ಸೂಚನೆ‘ನನ್ನನ್ನು ಪ್ರಚಾರದ ಸಾಧನವಾಗಿ ಬಳಸಲಾಗಿದೆ’: ಭಾರತ ಸರ್ಕಾರದ ವಿರುದ್ಧ ವಿಜಯ ಮಲ್ಯ ಆರೋಪಉಳಿದ ಭರವಸೆಗಳ ಈಡೇರಿಕೆಗೆ ವೇಗ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಎಸ್‌ಐಆರ್ : ಡಿ.ಕೆ. ಶಿವಕುಮಾರ ತಾಯಿ ಸೇರಿ ಹಲವು ಗಣ್ಯರಿಗೆ ನೋಟಿಸ್ಗರ್ಬಾದಲ್ಲಿ ಮುಸ್ಲಿಮರಿಗೆ ನಿಷೇಧ ಸರಿಯಲ್ಲ; ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ: ಅಠಾವಳೆ