LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪರಾರಿ ನೀರವ ಮೋದಿ ಪ್ರಕರಣಕ್ಕೆ ತಿರುವು: ಭ್ರಷ್ಟಾಚಾರದ ಸಾಕ್ಷ್ಯ ಇಲ್ಲ ಎಂದ ಸಿಬಿಐ

ಮುಂಬೈ, ಜೂನ್ 13 : ದೇಶ ತೊರೆದು ಪರಾರಿಯಾಗಿರುವ ನೀರವ ಮೋದಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಸಿಬಿಐ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಪ್ರಕರಣವು ವಿಶೇಷ ಸಿಬಿಐ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಇದನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಸಿಬಿಐ ಮನವಿ ಮಾಡಿತು.

ಸಾಲ ಸೌಲಭ್ಯಗಳ ದುರುಪಯೋಗದ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 321.88 ಕೋಟಿ ರೂಪಾಯಿ ವಂಚನೆ ಎಸಗಲಾಗಿದೆ ಎಂದು ಬ್ಯಾಂಕ್‌ನ ಮುಂಬೈ ವಲಯ ಕಚೇರಿ ನೀಡಿದ್ದ ದೂರಿನ ಆಧಾರದಲ್ಲಿ ನೀರವ್ ಮೋದಿ, ಅವರ ಸಂಸ್ಥೆಗಳು ಹಾಗೂ ಬ್ಯಾಂಕ್‌ನ ಕೆಲ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಬ್ಯಾಂಕ್‌ನ ಆಂತರಿಕ ತನಿಖೆಯಲ್ಲಿ ನೀರವ್ ಮೋದಿ ಪಾಲುದಾರಿಕೆ ಹೊಂದಿದ್ದ ಸೋಲಾರ್ ಎಕ್ಸ್‌ಪೋರ್ಟ್ಸ್, ಸ್ಟೆಲ್ಲರ್ ಡೈಮಂಡ್ಸ್, ಡೈಮಂಡ್ ಆರ್ ಯು ಎಸ್ ಹಾಗೂ ಫೈರ್ ಸ್ಟಾರ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಮತ್ತು ಫೈರ್ ಸ್ಟಾರ್ ಡೈಮಂಡ್ಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಡುವೆ ಪದೇ ಪದೇ ಹಣಕಾಸು ವಹಿವಾಟು ನಡೆದಿರುವುದು ಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ತನಿಖೆ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧವಾಗಲಿ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧವಾಗಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅಗತ್ಯ ಸಾಕ್ಷ್ಯಗಳು ದೊರೆತಿಲ್ಲ ಎಂದು ಸಿಬಿಐ ಪರ ವಕೀಲ ವಿಕ್ರಮ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಿಬಿಐ ಮನವಿಯನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶ ಜೆ.ಪಿ.ದಾರೇಕರ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನೀರವ ಮೋದಿ ಮತ್ತು ಅವರ ಸೋದರ ಮಾವ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ಅನಿಲ ಮೆನನ್ಅಮೆರಿಕ ದಿಗ್ಬಂಧನಕ್ಕೆ ಇರಾನ್ ತಿರುಗೇಟು; ತೈಲ ರಫ್ತು ಸ್ಥಗಿತದ ಎಚ್ಚರಿಕೆಧರ್ಮಸ್ಥಳ ಪ್ರಕರಣ: 7,000 ಪುಟಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ'ಸ್ತನ ಹಿಡಿದರೆ ಅತ್ಯಾಚಾರ ಯತ್ನವಲ್ಲ' ಎಂದ ಹೈಕೋರ್ಟ: ಸುಪ್ರೀಮ ಕೋರ್ಟ ತರಾಟೆಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ; 30ಕ್ಕೂ ಹೆಚ್ಚು ತಹಶೀಲ್ದಾರಗಳಿಗೆ ಹೊಸ ನಿಯುಕ್ತಿಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಅವಧಿ ವಿಸ್ತರಣೆಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆಮಹಿಳಾ ಸಂಘದ ಹೆಸರಲ್ಲಿ ₹43.40 ಲಕ್ಷ ವಂಚನೆ: ಇಬ್ಬರು ಮಹಿಳೆಯರ ಬಂಧನಕಡಲೆಕಾಯಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕನ ಸಾವುಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!