ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಿಟಕಿ, ಬಾಗಿಲು ಹಾಕದೇ ರತಿಕ್ರೀಡೆ; ಪೊಲೀಸ ಠಾಣೆ ಮೆಟ್ಟಿಲೇರಿದ ಪಕ್ಕದ ಮನೆ ಮಹಿಳೆ!

ಬೆಂಗಳೂರು, ೨೦:  ಪಕ್ಕದ ಮನೆಯ ಗಂಡ-ಹೆಂಡತಿ ಕಿಟಕಿ, ಬಾಗಿಲು ತೆರೆದಿಟ್ಟು ರತಿಕ್ರೀಡೆ ನಡೆಸುತ್ತಾರೆಂದು ಪಕ್ಕದ ಮನೆಯ ಮಹಿಳೆಯೊಬ್ಬಳು ವಿಚಿತ್ರ ದೂರೊಂದನ್ನು ಪೊಲೀಸ ಠಾಣೆಯಲ್ಲಿ ದಾಖಲಿಸಿದ್ದಾರೆ. ಗಿರಿನಗರ ಪೊಲೀಸ್ ಠಾಣೆಗೆ ಈ ವಿಚಿತ್ರ ಕೇಸ್ ಬಂದಿದ್ದು 44 ವರ್ಷದ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗಿರಿನಗರ ವ್ಯಾಪ್ತಿಯ ಅವಲಹಳ್ಳಿ ಏರಿಯಾದಲ್ಲಿ ಮಹಿಳೆ ವಾಸವಿರುವ ಬಾಡಿಗೆ ಮನೆಯ ಪಕ್ಕದ ಮನೆಯಲ್ಲಿ ಈ ವಿಚಿತ್ರ ದಂಪತಿ ವಾಸವಿದ್ದಾರೆ. ಮಹಿಳೆ ಇರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಮ್ ಇದೆ. ಪಕ್ಕದ ಮನೆ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ನಡೆಸುತ್ತಾರೆ; ಜೊತೆಗೆ ವಿಕೃತ ವರ್ತನೆ ಮಾಡುತ್ತಾರಂತೆ. ವಿಕೃತ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸುವ ಇವರ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿ ಉಂಟಾಗಿದೆ. ʼಕಿಟಕಿ ಬಾಗಿಲು ಹಾಕಿಕೊಳ್ಳಿʼ ಎಂದು ಆಗ್ರಹಿಸಿದರೆ, ʼನಮ್ಮ ಮನೆ, ನಮ್ಮ ಇಷ್ಟʼ ಎಂಬ ಉತ್ತರ ದಂಪತಿಯಿಂದ ಬಂದಿದೆ. ಆಕ್ಷೇಪಿಸಿದಾಗ, ಪಕ್ಕದ ಮನೆ ವ್ಯಕ್ತಿ ಮಹಿಳೆಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಇವರಿಗೆ ಬೆಂಬಲ ಕೊಟ್ಟಿದ್ದಾರಂತೆ. “ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ” ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ. ದೂರು ಸ್ವೀಕರಿಸಿ ಎಫ್‌ಐಆರ್‌ ಮಾಡಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲು ಮಾಡಲಾಗಿದೆ.

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.