LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬುಲ್ಡೋಜರ್‌ ವಿರೋಧಿಸಿ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಉನ್ನಾವೊ: ಅತಿಕ್ರಮಣ ತೆರವು ಕಾರ್ಯಾಚರಣೆ ವಿರೋಧಿಸಿ ಮಹಿಳೆಯೊಬ್ಬಳು ಮಕ್ಕಳೊಂದಿಗೆ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.



ಉತ್ತರ ಪ್ರದೇಶದ ಉನ್ನಾವೋದ ಹಸನಗಂಜ್ ತಹಸಿಲ್ ಇಟ್ಕುಟಿ ಗ್ರಾಮದ ವಿಕ್ರಮ ಖೇಡಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಲು ಮುಂದಾಗಿದ್ದ ಕಂದಾಯ ಇಲಾಖೆಯ ತಂಡದ ಎದುರೇ ಮಹಿಳೆಯೊಬ್ಬರು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದಳು. ಬಡಪಾಯಿ ಮಹಿಳೆ ತನ್ನ ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.



ಇಲಾಖೆಯ ತಂಡ ಒತ್ತುವರಿ ತೆರವಿಗೆ ಗುರುವಾರ ಗ್ರಾಮಕ್ಕೆ ತೆರಳಿತ್ತು. ತಂಡವು ಅತಿಕ್ರಮಣದಾರ ಅಜಯ ಎಂಬವರಿಗೆ ಸೈಟ್ ತೆರವುಗೊಳಿಸಲು ಕೇಳಿದರು. ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಂಪೂರ್ಣ ಮಾತುಕತೆ ನಡೆದಿದೆ. ಹೊತ್ತಿಗೆ ಅವರ ಪತ್ನಿಯು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು, ತಾನೂ ಸುರಿದುಕೊಂಡು ಗುಡಿಸಲಿಗೆ ಬೆಂಕಿ ಹಚ್ಚಿಕೊಂಡರು ಎಂದು ಈ ಘಟನೆ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.



ವಿಕ್ರಮ ಖೇಡದಲ್ಲಿರುವ ಸರ್ಕಾರಿ ಜಾಗದಲ್ಲಿ ಅಜಯ ಎಂಬುವರು ಮನೆ ನಿರ್ಮಾಣ ಮಾಡಿರುವ ಬಗ್ಗೆ ದೂರುಗಳು ಬಂದ ಕಾರಣ ಅದನ್ನು ತೆಗೆದುಹಾಕುವಂತೆ ತಿಳಿಸಲಾಗಿದೆ ಎಂದು ಹಸಂಗಂಜ್ ಉಪವಿಭಾಗಾಧಿಕಾರಿ ಅಂಕಿತ ಶುಕ್ಲಾ ಪತ್ರಕರ್ತರಿಗೆ ತಿಳಿಸಿದರು. ಆರೋಪಿ ಅಜಯ ಸರ್ಕಾರಿ ವಸತಿ ಯೋಜನೆಯ ಫಲಾನುಭವಿಯಾಗಿದ್ದು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಆರೋಪದ ಮೇರೆಗೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಹಿಂದೆ ಕೂಡ ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದು ಫೆಬ್ರವರಿ 13 ರಂದು, ಕಾನಪುರ ದೇಹತ್ ಜಿಲ್ಲೆಯ ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದೌಲಿ ಗ್ರಾಮದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಬಡಪಾಯಿ ಮಹಿಳೆ ಮತ್ತು ಅವರ ಮಗಳು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡಿದ್ದರು. ವೇಳೆ ಇಬ್ಬರೂ ಜೀವಂತ ದಹಿಸಿ ಹೋಗಿದ್ದರು. ಘಟನೆಯ ನಂತರ ರಾಜ್ಯದ ಯೋಗಿ ಸರ್ಕಾರವು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು, ಬಡವರ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಬುಲ್ಡೋಜರ್ಗಳನ್ನು ಬಳಸುವುದನ್ನು ಟೀಕಿಸಲಾಗಿತ್ತು.



 
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ