LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಭಾರತ ಜೋಡೋ ಯಾತ್ರೆಯಲ್ಲಿ ನಟಿ ಊರ್ಮಿಳಾ; ಕಾಶ್ಮೀರಿ ಪಂಡಿತ ಮಹಿಳೆಯರಿಂದ ರಾಹುಲ್‌ ಭೇಟಿ

ಜಮ್ಮು,ಜ.24- ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ ಪಾಲ್ಗೊಂಡಿದ್ದರು.



ಇಂದು ಬೆಳಿಗ್ಗೆ ಜಮ್ಮುವಿನ ನಗ್ರೋಟಾದ ಗ್ಯಾರಿಸನ್ ಪಟ್ಟಣದಿಂದ ಭಾರೀ ಚಳಿಯಲ್ಲಿ ಪುನರಾರಂಭಗೊಂಡ ಯಾತ್ರೆಗೆ ಉರ್ಮಿಳಾ ಮಾತೋಂಡ್ಕರ ಬೆಂಬಲ ವ್ಯಕ್ತಪಡಿಸಿದ್ದಾರೆ.



1990ರ ದಶಕದಲ್ಲಿ ಜನಪ್ರಿಯರಾಗಿದ್ದ ರಂಗೀಲಾ ಖ್ಯಾತಿಯ ಊರ್ಮಿಳಾ ಅವರು, 2019 ರ ಸೆಪ್ಟೆಂಬರ್‍ನಲ್ಲಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ, ಆರು ತಿಂಗಳ ಬಳಿಕ 2020 ರಲ್ಲಿ ಶಿವಸೇನೆಗೆ ಸೇರಿದ್ದರು. ಇಂದು ಕೆನೆ ಬಣ್ಣದ ಸಾಂಪ್ರದಾಯಿಕ ಕಾಶ್ಮೀರ  ಗೌನ್ ಮತ್ತು ಬೀನಿ ಕ್ಯಾಪ್ ಧರಿಸಿ ಮಾತೋಂಡ್ಕರ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಹಾದಿಯುದ್ಧಕ್ಕೂ ರಾಹುಲ್ ಗಾಂಧಿಯೊಂದಿಗೆ ಚರ್ಚೆ ನಡೆಸುತ್ತಿರುವುದು ಕಂಡು ಬಂತು.



ಜೊತೆಗೆ ಖ್ಯಾತ ಲೇಖಕ ಪೆರುಮಾಳ ಮುರುಗನ್, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ ರಸೂಲ್ ವಾನಿ, ಹಿಂದಿನ ಅಧ್ಯಕ್ಷ ಜಿ.ಎ.ಮಿರ್, ಮಾಜಿ ಸಚಿವ ಅಬ್ದುಲ್ ಹಮೀದ ಕರ್ರಾ ಸೇರಿದಂತೆ ನೂರಾರು ಜನ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹೆಜ್ಜೆ ಹಾಕಿದರು.



ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆಪ್ಟಂಬರ್ 7ರಂದು ಆರಂಭವಾದ ಯಾತ್ರೆ ಕಳೆದ ಗುರುವಾರ ಪಂಜಾಬ್ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿ, ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭವ್ಯ ರ್ಯಾಲಿಯೊಂದಿಗೆ ಶ್ರೀನಗರದಲ್ಲಿ ಸಮಾರೂಪಗೊಳ್ಳಲಿದೆ.



ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ನವಾಂಗ್ ರಿಗ್ಜಿನ್ ಜೋರಾ ನೇತೃತ್ವದ 65 ಸದಸ್ಯರ ನಿಯೋಗ ರಾಹುಲ್‍ಗಾಂಧಿಯವರೊಂದಿಗೆ ಸಮಾಲೋಚನೆ ನಡೆಸಿದ್ದು, ತಮ್ಮ ಜನರ ಸಮಸ್ಯೆಗಳನ್ನು ವಿವರಿಸಿದೆ ಎಂದು ನಿಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.



ಪ್ರಸಿದ್ಧ ಕೋಲ್-ಕಂಡೋಲಿ ದೇವಸ್ಥಾನದ ಹೊರಗೆ ಕಾಶ್ಮೀರಿ ಪಂಡಿತರ ವಲಸಿಗ ಮಹಿಳೆಯರ ಗುಂಪು, ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಹೂವಿನ ದಳಗಳನ್ನು ಹಿಡಿದು ಗಾಂಧಿಯನ್ನು ಸ್ವಾಗತಿಸಿದರು. ನಾವು ಕಾಶ್ಮೀರದಿಂದ ವಲಸೆ ಬಂದ ನಂತರ ಕಳೆದ ಮೂರು ದಶಕಗಳಿಂದ ಜಮ್ಮುವಿನಲ್ಲಿ ಅಲೆದಾಡುತ್ತಿದ್ದೇವೆ. ಉದ್ಯೋಗ ದೊರಕಿಸಿಕೊಳ್ಳಲು ಮತ್ತು ಪುನರ್ವಸತಿಗೆ ನೆರವು ನೀಡಲು ಸಹಾಯ ಮಾಡಬೇಕು ಎಂದು ರಾಹುಲ್‍ಗಾಂಧಿವರಲ್ಲಿ ಮನವಿ ಮಾಡಲು ಇಲ್ಲಿಗೆ ಬಂದಿದ್ದೇವೆ ಎಂದು ಗೀತಾ ಕೌಲ್ ತಿಳಿಸಿದ್ದಾರೆ.



ಕಾಶ್ಮೀರಿ ಪಂಡಿತರ ರಕ್ಷಣೆ ಮತ್ತು ಪುನರ್ವಸತಿಯ ಸವಾಲುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬಿಜೆಪಿ ರಾಜಕೀಯ ಮಾತ್ರ ಮಾಡುತ್ತಿದೆ, ಅದನ್ನು ಬಿಟ್ಟು ಜನಪರವಾಗಿ ನೆರವು ನೀಡಲು ವಿಫಲವಾಗಿದೆ ಎಂದು ಮಹಿಳೆಯರು ದೂರಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ರೂ. ವಂಚನೆ ಪ್ರಕರಣ!ಬೆಳಗಾವಿಯಲ್ಲಿ ಗುಂಡಿನ ದಾಳಿ: ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡ ರಚನೆಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಉಮಾ ಶಂಕರಿಸೋನಮ್ ವಾಂಗಚುಕ್ ಆರೋಗ್ಯ ಗಂಭೀರ; ಬಲವಂತವಾಗಿ ಆಹಾರ ನೀಡುವಂತೆ ದೆಹಲಿ ಹೈಕೋರ್ಟನಲ್ಲಿ ಅರ್ಜಿಇ.ಡಿ ಸಮನ್ಸ್ ಬೆನ್ನಲ್ಲೇ ಮಮತಾ ಬಣ ತೊರೆದ ಮದನ್ ಮಿತ್ರಾಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ಅನಿಲ ಮೆನನ್ಅಮೆರಿಕ ದಿಗ್ಬಂಧನಕ್ಕೆ ಇರಾನ್ ತಿರುಗೇಟು; ತೈಲ ರಫ್ತು ಸ್ಥಗಿತದ ಎಚ್ಚರಿಕೆಧರ್ಮಸ್ಥಳ ಪ್ರಕರಣ: 7,000 ಪುಟಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ'ಸ್ತನ ಹಿಡಿದರೆ ಅತ್ಯಾಚಾರ ಯತ್ನವಲ್ಲ' ಎಂದ ಹೈಕೋರ್ಟ: ಸುಪ್ರೀಮ ಕೋರ್ಟ ತರಾಟೆಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ; 30ಕ್ಕೂ ಹೆಚ್ಚು ತಹಶೀಲ್ದಾರಗಳಿಗೆ ಹೊಸ ನಿಯುಕ್ತಿ