LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

‘ಮತ ಕಳ್ಳತನ’ ಆರೋಪದಲ್ಲಿ ಹುರುಳಿಲ್ಲ : ಕುಮಾರಸ್ವಾಮಿ

ಮುಳಬಾಗಿಲು (ಕೋಲಾರ), ಅ. 7 (ಸಮದರ್ಶಿ ಸುದ್ದಿ): ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ‘ಮತ ಕಳ್ಳತನ’ದ ಆರೋಪ ಮಾಡುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಳಬಾಗಿಲಿನಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್‌ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

‘ಸುಮಾರು 90 ಸಾವಿರ ಮತದಾರರ ಹೆಸರು ಅಳಿಸುವಂತೆ ಅರ್ಜಿಗಳು ಬಂದಿವೆ ಎನ್ನಲಾಗುತ್ತಿದೆ. ಆದರೆ ಅವುಗಳ ಪರಿಶೀಲನೆಯೇ ಇನ್ನೂ ನಡೆದಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಬಳಿ ಯಾವ ಮಾಹಿತಿ ಇದೆ? ಯಾವ ಆಧಾರದ ಮೇಲೆ ಹೊಸದಿಲ್ಲಿಯ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ?’ ಎಂದು ಪ್ರಶ್ನಿಸಿದರು.

ಎಸ್‌ಐಆರ್‌ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅವರು, ‘ಮತ ಕಳ್ಳತನ’ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಸನ ಜಿಲ್ಲೆಯನ್ನು ದಾಟಿ ಮುಂದೆ ಸಾಗಿಲ್ಲ. 10 ಟಿಎಂಸಿ ಅಡಿ ನೀರು ತರುವುದಾಗಿ ಹೇಳಿದ್ದವರು ಈಗ ಅದನ್ನು 2 ಟಿಎಂಸಿ ಅಡಿಗೆ ಇಳಿಸಿದ್ದಾರೆ. ಎರಡು ವರ್ಷಗಳಿಂದ ‘ಮುಂದಿನ ವರ್ಷ’ ಎಂದು ಹೇಳುತ್ತ ಯೋಜನೆಯನ್ನು ಮುಂದೂಡಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳ ಸಾಧನೆಯನ್ನು ಜನರ ಮುಂದಿಡಬೇಕು. ‘ಸಧೃಢ ಸಂಕಲ್ಪ’ದಂತಹ ಯೋಜನೆಗಳನ್ನು ಘೋಷಿಸಿದರೆ ಸಾಲದು; ಅವುಗಳಿಗೆ ಅಗತ್ಯ ಅನುದಾನ ಮೀಸಲಿಟ್ಟಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದರು.

ಐದು ಗ್ಯಾರಂಟಿಗಳ ಕುರಿತು ಟೀಕಿಸಿದ ಅವರು, ‘ಗೃಹಲಕ್ಷ್ಮಿ ಯೋಜನೆಯ ಸ್ಥಿತಿಯೇ ಸ್ಪಷ್ಟವಾಗಿಲ್ಲ. ಈಗ ಹಾಲಿನ ದರ ಹೆಚ್ಚಿಸುವ ಅನಿವಾರ್ಯತೆಯನ್ನೂ ಸರ್ಕಾರ ಎದುರಿಸುತ್ತಿದೆ’ ಎಂದರು.

ರೈತರಿಗೆ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು. ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ ಬಳಿಕ ಬರ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮುಖ್ಯಮಂತ್ರಿ ಹಾಗೂ ಶಾಸಕರು ಹೈಕಮಾಂಡ್‌ನ ಸೂಚನೆಗಾಗಿ ಹೆಚ್ಚಿನ ಸಮಯವನ್ನು ದೆಹಲಿ ಪ್ರವಾಸದಲ್ಲೇ ಕಳೆಯುತ್ತಿದ್ದಾರೆ. ಅಧಿಕಾರ ಹಂಚಿಕೆ ಕುರಿತ ಚರ್ಚೆಗಳ ಬಗ್ಗೆಯೂ ಜನರಿಗೆ ತಿಳಿದಿದೆ ಎಂದು ಕುಮಾರಸ್ವಾಮಿ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾನೇಶ ಕುಮಾರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಅ.10ಕ್ಕೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ : ಪರಮೇಶ್ವರದೆಹಲಿಯಲ್ಲಿ ಪ್ರತಿಭಟನೆ ತೀವ್ರ: ರಾಹುಲ್‌, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆಮೋದಿ ನಾಯಕತ್ವದಲ್ಲಿ ಭಾರತ ಬಲಾಢ್ಯ ರಾಷ್ಟ್ರ: ಜಗದೀಶ ಶೆಟ್ಟರ್ಅಣುಗಳ ‘ಕನ್ನಡಿ ರಹಸ್ಯ’ ಭೇದಿಸಿದ ವಿಜ್ಞಾನಿಗಳಿಗೆ ನೊಬೆಲ್‌ಗರ್ಭಿಣಿಯ ರೀತಿ ಎಸಿ ರಹಸ್ಯ ಕಾರ್ಯಾಚರಣೆ; ಅಂತರರಾಜ್ಯ ಭ್ರೂಣಲಿಂಗ ಪತ್ತೆ ಜಾಲ ಬಯಲು‘ಸ್ಟಿಂಗ್ ಆಪರೇಷನ್’ ಪ್ರಯತ್ನ: ಐವರು ಸಚಿವರಿಗೆ ಡಿ.ಕೆ. ಶಿವಕುಮಾರ ಎಚ್ಚರಿಕೆ‘ಮತ ಕಳ್ಳತನ’ ಆರೋಪದಲ್ಲಿ ಹುರುಳಿಲ್ಲ : ಕುಮಾರಸ್ವಾಮಿSIR ಅಕ್ರಮ ಬಯಲಾಗುವ ಭೀತಿಯಿಂದ ರಾಜಪಾಲರ ಮೊರೆ: ಬಿಜೆಪಿ–ಜೆಡಿಎಸ್ ವಿರುದ್ಧ ಡಿ.ಕೆ. ಶಿವಕುಮಾರ ವಾಗ್ದಾಳಿ