ಅಳ್ನಾವರ, ಜೂನ್ 2: ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಹೊಸ ಆಡಳಿತ ಸಮಿತಿ ರಚನೆಗೆ ಸಂಬಂಧಿಸಿದಂತೆ ಜುಲೈ 10ರಂದು ಮಧ್ಯಾಹ್ನ 3.30ಕ್ಕೆ ಸ್ಥಳೀಯ ಶಾದಿ ಮಹಲ್ ಸಭಾಂಗಣದಲ್ಲಿ ಸದರಿ ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ಸಭೆಯನ್ನು ಕರೆಯಲಾಗಿದೆ.
ಧಾರವಾಡ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಡಬ್ಲ್ಯು.ಪಿ. ಸಂಖ್ಯೆ 107338/2025 ಹಾಗೂ 108618/2025 ಪ್ರಕರಣಗಳು ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದ ಮೇರೆಗೆ ಹೊಸ ಆಡಳಿತ ಸಮಿತಿ ರಚಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಧಾರವಾಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ಸಂಬಂಧಿಸಿದ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ - ಸೂಚನೆಗಳನ್ನು ನೀಡುವ ಮೂಲಕ ಹೊಸ ಆಡಳಿತ ಸಮಿತಿ ಆಯ್ಕೆ ಪ್ರಕ್ರಿಯೆಗೆ ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಸಭೆಗೆ ಎಲ್ಲ ಸಾಮಾನ್ಯ ಸದಸ್ಯರು ನಿಗದಿತ ಸಮಯಕ್ಕೆ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.