ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ..

ಹಾವೇರಿ: ಚುನಾವಣಾ ಕಾರ್ಯದ ಹೆಚ್ಚಿನ ಅನುಭವ ಹೊಂದಿದ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ರಾಜ್ಯದಲ್ಲೇ ಉತ್ತಮ ಜಿಲ್ಲಾ ಚುನಾಚಣಾಧಿಕಾರಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ರವಿವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜಿಲ್ಲಾಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಹಿರೇಕೆರೂರು ತಾಲೂಕಿನ ತಹಶೀಲ್ದಾರ ಶ್ರೀಮತಿ ರೇಣುಕಾ ಎಂ. ಅವರಿಗೆ ಉತ್ತಮ ಸಹಾಯಕ ಮತದಾನ ನೊಂದಣಾಧಿಕಾರಿ ಹಾಗೂ ಹಾವೇರಿ ವಿಧಾನ ಸಭಾಕ್ಷೇತ್ರದ ಭಾಗಸಂಖ್ಯೆ ೫೨,೮೪ರ ಬೂತ್ ಮಟ್ಟದ ಅಧಿಕಾರಿ ಶಿಕ್ಷಕ ಗುಡ್ಡಪ್ಪ ಲಚ್ಚಮ್ಮವರ ಅವರಿಗೆ ಉತ್ತಮ ಬಿಎಲ್‌ಒ ಪ್ರಶಸ್ತಿ ನೀಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.