LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
International News

ಭಾರತ ನಾಯಕತ್ವದ ಬೇಜವಾಬ್ದಾರಿಯಿಂದ ಬುಲೆಟ್ ರೈಲು ಯೋಜನೆ ವಿಳಂಬ: ಜಪಾನ್ ಮಾಜಿ ಸಚಿವ ಆರೋಪ

ಟೋಕಿಯೊ, ಜುಲೈ 17: ಭಾರತದ ಮೊದಲ ಬುಲೆಟ್ ರೈಲು ಯೋಜನೆ ವಿಳಂಬವಾಗಿರುವುದಕ್ಕೆ ಭಾರತದ ಅಧಿಕಾರಿಗಳು ಮತ್ತು ರಾಜಕೀಯ ನಾಯಕತ್ವದ ಬೇಜವಾಬ್ದಾರಿಯೇ ಸಂಪೂರ್ಣ ಕಾರಣ ಎಂದು ಜಪಾನ್‌ ಮಾಜಿ ಸಚಿವ ಅಕಿಹಿರೊ ಮಕಿಹಾರ ಆರೋಪಿಸಿದ್ದಾರೆ.

ಭಾರತದ ಶಿಂಕನ್ಸೆನ್ (ಬುಲೆಟ್ ರೈಲು) ಯೋಜನೆಗೆ ತಾವು ನೇರವಾಗಿ ಸಂಬಂಧ ಹೊಂದಿದ್ದೆ ಎಂದು ಹೇಳಿರುವ ಅವರು, ಅಂತರರಾಷ್ಟ್ರೀಯ ಸಭೆಗಳು ಹಾಗೂ ಮಾತುಕತೆಗಳ ವೇಳೆ ಭಾರತದ ಪ್ರತಿನಿಧಿಗಳಿಂದ ಪದೇಪದೇ ಬೇಜವಾಬ್ದಾರಿ ಮತ್ತು ಅಸಮರ್ಪಕ ವರ್ತನೆ ಕಂಡುಬಂದಿತ್ತು ಎಂದು ಟೀಕಿಸಿದ್ದಾರೆ.

ಭಾರತದ ಅಧಿಕಾರಿಗಳು ನೀಡಿದ ಭರವಸೆಗಳನ್ನು ಪಾಲಿಸುತ್ತಿರಲಿಲ್ಲ. ಸಭೆಗಳಲ್ಲಿ ಒಪ್ಪಿಕೊಂಡ ವಿಷಯಗಳಿಂದ ಕೆಲವೇ ದಿನಗಳಲ್ಲಿ ಹಿಂದೆ ಸರಿಯುತ್ತಿದ್ದರು. ಕೊನೆಯ ಕ್ಷಣದವರೆಗೂ ತಮ್ಮ ಸ್ವಾರ್ಥ ಸಾಧನೆಗೇ ಆದ್ಯತೆ ನೀಡುತ್ತಿದ್ದರು. ಇದರಿಂದ ಯೋಜನೆಯ ಅನುಷ್ಠಾನಕ್ಕೆ ಗಂಭೀರ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ.

ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಸಚಿವರ ವರ್ತನೆಯೂ ನಿರಾಶಾದಾಯಕವಾಗಿತ್ತು. ಉನ್ನತ ಹುದ್ದೆಯಲ್ಲಿರುವವರೇ ಈ ರೀತಿಯ ವರ್ತನೆ ತೋರಿದಾಗ ಅವರೊಂದಿಗೆ ವಿಶ್ವಾಸಾರ್ಹವಾಗಿ ಕೆಲಸ ಮಾಡುವುದು ಕಷ್ಟವಾಗಿತ್ತು ಎಂದು ಮಕಿಹಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗಾಗಿ ಜಪಾನ್ ಸರ್ಕಾರ ಮತ್ತು ಅಲ್ಲಿನ ಜನರು ಅಪಾರ ಹಣ, ಸಮಯ ಹಾಗೂ ತಂತ್ರಜ್ಞಾನವನ್ನು ಹೂಡಿಕೆ ಮಾಡಿದ್ದಾರೆ. ಅವರ ಗೌರವದ ದೃಷ್ಟಿಯಿಂದಲೇ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ. ಬುಲೆಟ್ ರೈಲು ಯೋಜನೆ ವಿಳಂಬವಾಗಿರುವುದಕ್ಕೆ ನೂರಕ್ಕೆ ನೂರರಷ್ಟು ಭಾರತದ ಕಡೆಯವರೇ ಕಾರಣ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದ್ದಾರೆ.

ಜಪಾನ್ ಪ್ರಧಾನಿ ಭೇಟಿ ನೀಡಿದ ಬಳಿಕವೂ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಯೋಜನೆಯ ಪ್ರಮುಖ ಸುರಕ್ಷತಾ ಅಂಶವಾಗಿರುವ ಸಿಗ್ನಲ್ ವ್ಯವಸ್ಥೆಯಲ್ಲೂ ಜಪಾನ್‌ನ ಪಾತ್ರವನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದ್ದು, ಇದರಿಂದ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಭಾರತದಲ್ಲಿ ಮೊದಲ ಬುಲೆಟ್ ರೈಲು ಸೇವೆಯ ಮೊದಲ ಹಂತವನ್ನು 2027ರ ಆಗಸ್ಟ್ 15ರಿಂದ ಆರಂಭಿಸಲಾಗುವುದು ಎಂದು ಘೋಷಿಸಿದ್ದರು. ಮೊದಲ ಹಂತದಲ್ಲಿ ಸೂರತ್–ಬಿಲಿಮೋರಾ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಸಂಪೂರ್ಣ ಕಾರ್ಯಾಚರಣೆಗೆ ಬರಲಿದೆ ಎಂದು ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ