ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗೋವಾ ಪ್ರವಾಸಕ್ಕೆ ಹೋಗಿದ್ದ ಇಂಜಿನೀಯರಿಂಗ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಬಸ್ ಚಾಲಕನ ಬಂಧನ

ವಾಸ್ಕೋ: ಗೋವಾ ಪ್ರವಾಸಕ್ಕೆ ಬಂದಿದ್ದ ಮುಂಬೈ ಮೂಲದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ರಜೆ ಇದ್ದ ಕಾರಣ ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ವಾಸ್ಕೋ ಬಳಿಯ ಮರ್ಮಗೋವಾದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ ವಾಸು ಲಮಾಣಿ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ಇಂಜಿನೀಯರಿಂಗ ವಿದ್ಯಾರ್ಥಿನಿಯಾಗಿದ್ದು, ಬಸ್ ಚಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ರವಿವಾರ ಪೊಲೀಸರಿಗೆ ದೂರು ನೀಡಿದ್ದಾಳೆ. ಮುಂಬೈನಿಂದ ಇತ್ತೀಚೆಗೆ ಗೋವಾಕ್ಕೆ ಬಂದ 14 ಜನರ ಗುಂಪಿನ ಭಾಗವಾಗಿದ್ದ ವಿದ್ಯಾರ್ಥಿನಿ ಹಾಗೂ ತಂಡದವರು ಮಿನಿಬಸ್ ಬಾಡಿಗೆಗೆ ಪಡೆದಿದ್ದರು. ಆಗ ಈ ಘಟನೆ ನಡೆದಿದೆ.

ಆರೋಪಿ ಚಾಲಕನನ್ನು ಸೋಮವಾರ ಮ್ಯಾಜಿಸ್ಟ್ರೇಟ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.