ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೈಮೇಲೆ ಕಾಂತಾರ ದೇವರು ಬರುತ್ತೆ ಎಂದು ವಂಚನೆ; ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೈಮೇಲೆ ಕಾಂತಾರಾ ದೇವರು ಬಂದಿದೆ ಎಂದು ಹೇಳಿ ಅಮಾಯಕ ಜನರಿಗೆ ಮೋಸ ಮಾಡಿ ವಂಚನೆ ಮಾಡುತ್ತಿದ್ದಾಳೆ ಎಂದು ದೂರು ದಾಖಲಾಗಿದೆ.

ಇಲ್ಲಿನ ಮಳವಳ್ಳಿ ತಾಲೂಕಿನ ಪೇಟೆ ಬದಿಯ ನಿವಾಸಿ ಶಿವಲಿಂಗಮ್ಮ ಎಂಬ ಮಹಿಳೆ ತನ್ನ ಮೇಲೆ ದೇವರು ಬರುತ್ತಾರೆ ಎಂದು ಕಾಂತಾರಾ ಸಿನಿಮಾದಲ್ಲಿ ಕೂಗುವಂತೆ ಕೂಗಿ ಜನರನ್ನು ನಂಬಿಸಿ ವಂಚಿಸುತ್ತಿದ್ದಾಳೆ. ಸಮಸ್ಯೆಗೆ ಪರಿಹಾರ ನೀಡುತ್ತೇನೆ ಎಂದು ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ಮಹಿಳೆ ವಿರುದ್ಧ ಮಳವಳ್ಳಿ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.