LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ವಾಟ್ಸಪ್ ಸಂದೇಶ ನಂಬಿ ಗಡ್ಡೆ ತಿಂದ ವ್ಯಕ್ತಿಯ ಸಾವು 

ಚೆನ್ನೈ : ಫ್ಲೇಮ್​ ಲಿಲ್ಲಿ ಗಡ್ಡೆ ತಿಂದರೆ ದೇಹದಾರ್ಢ್ಯ ವೃದ್ಧಿಯಾಗುತ್ತದೆ ಎಂಬ ಸಂದೇಶವೊಂದು ಕಾನ್ಸಟೇಬಲ್​ ಅಭ್ಯರ್ಥಿ ಮತ್ತು ಆತನ ಗೆಳೆಯನಿಗೆ ಬಂದಿದೆ. ಈ ವಾಟ್ಸಪ್​ ಸಂದೇಶವನ್ನು ನಂಬಿದ ಇಬ್ಬರೂ ಫ್ಲೇಮ್​ ಲಿಲ್ಲಿ ಗಡ್ಡೆ ತಿಂದು ಒಬ್ಬರು ಅಸ್ವಸ್ಥರಾದ ಮತ್ತೊಬ್ಬ ಸಾವಿಗೀಡಾದ ಘಟನೆ ತಿರುಪತ್ತೂರು ನಗರದಲ್ಲಿ ನಡೆದಿದೆ.



ತೀವ್ರ ಅಸ್ವಸ್ಥರಾದ ಕಾನ್ಸ್​ಟೇಬಲ್​ ಅಭ್ಯರ್ಥಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿರುಪತ್ತೂರಿನ ಲೋಗನಾಥನ (25) ಮತ್ತು ಸಮೀಪದ ಗ್ರಾಮದ ರತ್ನಂ ಖಾಸಗಿ ಕ್ವಾರಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಲೋಗನಾಥನ್ ಪೊಲೀಸ್ ಪಡೆಗೆ ಸೇರಲು ಆಸಕ್ತಿ ಹೊಂದಿದ್ದರು. ಪೊಲೀಸ್ ಇಲಾಖೆ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಾಟ್ಸಪ್ ಸಂದೇಶವನ್ನು ನೋಡಿದ ಅವರು ಫ್ಲೇಮ್​ ಲಿಲ್ಲಿ ಗಡ್ಡೆ ತಿಂದಿದ್ದಾರೆ. ಜೊತೆಗೆ ಕೆಲಸ ಮಾಡುವ ರತ್ನಮ್ ಸಹ ಇದನ್ನು ತಿಂದಿದ್ದಾರೆ. ಕೂಡಲೇ ಇಬ್ಬರು ಅಸ್ವಸ್ಥರಾಗಿದ್ದರು.



ಅಸ್ವಸ್ಥೆಯಿಂದ ಬಳಲುತ್ತಿದ್ದ ಈ ಇಬ್ಬರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಲೋಗನಾಥನ್​ ಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ ಗಾಂಧಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಲೋಗನಾಥನ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಅಂಬೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST