LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಅ. ೧೧ರಿಂದ ನವರಾತ್ರಿ ಉತ್ಸವ

news_1791465112_0_451.webp

ಧಾರವಾಡ, ಅ. ೮ (ಸಮದರ್ಶಿ ಸುದ್ದಿ): ನಗರದ ಕೆಲಗೇರಿ ರಸ್ತೆಯ ಶಾಂತಿನಿಕೇತನ ನಗರದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ ೧೧ರಿಂದ ೨೦ರವರೆಗೆ ನವರಾತ್ರಿ ಉತ್ಸವವನ್ನು ಸಡಗರ, ಸಂಭ್ರಮ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶಾಂತಿನಿಕೇತನ ನಗರದಲ್ಲಿ ನೆಲೆಸಿರುವ ಶ್ರೀ ಕರಿಯಮ್ಮ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿಯ ತ್ರಿಗುಣಾತ್ಮಕ ಸ್ವರೂಪವೆಂದು ಭಕ್ತರು ಆರಾಧಿಸುತ್ತಾರೆ. ಭಕ್ತರು ಹಾಗೂ ರೈತರ ಪಾಲಿಗೆ ದೇವಿಯು ಆದಿಶಕ್ತಿಯಾಗಿದ್ದಾಳೆ ಎಂಬ ನಂಬಿಕೆಯಿದೆ.

ಉತ್ಸವದ ಅಂಗವಾಗಿ ಪ್ರತಿದಿನ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ. ೧೧ರಂದು ರೇಣುಕಾ ಯಲ್ಲಮ್ಮ, ೧೨ರಂದು ಗಾಯತ್ರಿ, ೧೩ರಂದು ಪದ್ಮಾವತಿ, ೧೪ರಂದು ಅಂಬಾ ಭವಾನಿ, ೧೫ರಂದು ಸರಸ್ವತಿ, ೧೬ರಂದು ಲಕ್ಷ್ಮಿ, ೧೭ರಂದು ಶಾಕಾಂಬರಿ, ೧೮ರಂದು ಅನ್ನಪೂರ್ಣೇಶ್ವರಿ, ೧೯ರಂದು ಮಹಾಗೌರಿ ಹಾಗೂ ೨೦ರಂದು ಮಹಿಷಾಸುರ ಮರ್ದಿನಿ ರೂಪದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುವುದು.

ಅ. ೧೬ರಂದು ಸಂಜೆ ೪.೩೦ಕ್ಕೆ ಸುಮಂಗಲೆಯರಿಂದ ಕುಂಕುಮಾರ್ಚನೆ ನಡೆಯಲಿದೆ. ಉತ್ಸವದ ಪ್ರತಿದಿನ ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಅ. ೨೦ರಂದು ಬೆಳಗ್ಗೆ ಸಂಕಲ್ಪ ಹಾಗೂ ಕಾಕಡಾರತಿ ನೆರವೇರಲಿದ್ದು, ಸಂಜೆ ೪.೩೦ಕ್ಕೆ ಅಲಂಕೃತ ಪಲ್ಲಕ್ಕಿ ಉತ್ಸವ ಜರುಗಲಿದೆ.

ನವರಾತ್ರಿ ಉತ್ಸವದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ಎನ್.ಎಚ್. ಕೋನರೆಡ್ಡಿ ಮನವಿ ಮಾಡಿದ್ದಾರೆ.

ದೇವಸ್ಥಾನದ ಆವರಣದಲ್ಲಿರುವ ಸಭಾಭವನವನ್ನು ಸುಸಜ್ಜಿತ ಹಾಗೂ ಆಕರ್ಷಕ ಸಭಾಭವನವನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ಭಕ್ತರು ಉದಾರವಾಗಿ ಸಹಾಯ, ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.

ಉತ್ಸವದ ಯಶಸ್ಸಿಗಾಗಿ ಟ್ರಸ್ಟ್ ಪದಾಧಿಕಾರಿಗಳಾದ ಕೆ.ಎನ್. ಕುರಕುರಿ, ಬಿ.ಟಿ. ರೆಡ್ಡಿ, ಮಹಾವೀರ ಉಪಾಧ್ಯೆ, ವಿಶ್ವನಾಥ ಯಲಿಗಾರ, ಎನ್.ಕೆ. ಅರಳಿಕಟ್ಟಿ, ಎಸ್.ಕೆ. ಗಾಳಿ, ಬಿ.ಜೆ. ಪವಾರ, ಅಜಿತ ಸಾಣಿಕೊಪ್ಪ, ಶೈಲಜಾ ಅಂಬಡಗಟ್ಟಿ ಹಾಗೂ ಹೇಮಾವತಿ ಪೂಜಾರ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವಕ್ಕೆ ಮೇಯರ್, ಉಪಮೇಯರ್ ಆಹ್ವಾನಿಸದಂತೆ ಆಗ್ರಹಮತದಾರರು ಸತ್ತಿದ್ದಾರೆಂದು ಶಾಸಕರ ಲೆಟರ್‌ಹೆಡ್‌ನಲ್ಲಿ ಅರ್ಜಿ: ಯತ್ನಾಳ ಸೇರಿ ಮೂವರ ವಿರುದ್ಧ ಎಫ್‌ಐಆರ್ಸೆನ್ಸೆಕ್ಸ್ 1,045 ಅಂಕ, ನಿಫ್ಟಿ 371 ಅಂಕ ಕುಸಿತ; ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ: ಅಭಿಜೀತ ದೀಪ್ಕೆಮತಗಳ ಕಳ್ಳತನಕ್ಕೆ ಮೂರು ಸಾಕ್ಷ್ಯಗಳಿವೆ, ಮೋದಿ, ಶಾ ಉತ್ತರಿಸಲಿ: ಧ್ರುವ ರಾಠಿಗ್ಯಾನೇಶ ಕುಮಾರ ಹೋದರೆ ಮತ್ತೊಬ್ಬ ಅಜ್ಞಾನೇಶ ಬರುತ್ತಾನೆ, ಎಸ್‌ಐಆರ್‌ ರದ್ದಾಗಲಿ: ಪ್ರಕಾಶ ರಾಜ್ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವಜೇನುನೊಣಗಳ ದಾಳಿಗೆ ಬೆಳಗುಂದಿ ರೈತ ಬಲಿಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಅ. ೧೧ರಿಂದ ನವರಾತ್ರಿ ಉತ್ಸವಸುಳ್ಳು ಆರೋಪಗಳ ವಿರುದ್ಧ ಕಾನೂನು ಸಮರ: ಸತೀಶ ಜಾರಕಿಹೊಳಿ