LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮಳೆ, ಶೀತಗಾಳಿ: ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.27 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ಧಾರವಾಡ, ಜುಲೈ 26: ಧಾರವಾಡ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಶೀತಗಾಳಿ ಬೀಸುತ್ತಿರುವದರಿಂದ ಈಗಾಗಲೇ ಜುಲೈ 25, 26 ರಂದು ಎರಡು ದಿನ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ನೀಡಿದ ರಜೆಯನ್ನು ನಾಳೆ ಜುಲೈ 27, 2024 ರವರೆಗೆ ಮುಂದುವರೆಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಶುಕ್ರವಾರ ಸಂಜೆ ಆದೇಶಿಸಿದ್ದಾರೆ.



ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ. ಮತ್ತು ಶೀತಗಾಳಿ ಬಿಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



ಈ ರಜಾ ದಿನಗಳನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣೆಕೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆಮಾಡೆಲ್ ಲಗೇಜ್‌ನಲ್ಲಿ 11.82 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಕಿವೀಸ್ ಕ್ರಿಕೆಟ್‌ನ ಸುವರ್ಣ ಅಧ್ಯಾಯ ಅಂತ್ಯ; ವಿಲಿಯಮ್ಸನ್ ನಿವೃತ್ತಿನಿನ್ನೆ ಇಸ್ರೇಲ್‌ ದಾಳಿಗೆ ಬೆಂಬಲ, ಇಂದು ಪುತ್ರನಿಗಾಗಿ ಕಣ್ಣೀರು: ಹಳೆಯ ಪೋಸ್ಟಗಳು ವೈರಲ್!ಮಾವಿನ ಹಣ್ಣು ಸೇವಿಸಿ ಬೀದರ ಮೂಲದ ಇಬ್ಬರು ಸಹೋದರಿಯರ ಸಾವುಕರ್ನಾಟಕದ ನೀರಿನ ಹಕ್ಕಿಗೆ ದೆಹಲಿಯಲ್ಲಿ ಧ್ವನಿ : ಕೃಷ್ಣಾ ತೀರ್ಪಿನಿಂದ ಮಹದಾಯಿ ತನಕ ಬಾಕಿ ಬೇಡಿಕೆಗಳಿಗೆ ವೇಗ ನೀಡುವಂತೆ ಒತ್ತಾಯಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ: ವಿಜಯೇಂದ್ರ ಆರೋಪಇವಿಎಂಗಳ ಭಸ್ಮ : ಕೋಲ್ಕತ್ತಾ ಕಟ್ಟಡ ಅಗ್ನಿ ಅವಘಡದ ಹಿಂದೆ ಸಂಚು ಶಂಕೆಕಾನೂನಿನ ಭಯ ಮಾಯವೇ? ರಸ್ತೆಯಲ್ಲಿ ಉಗುಳಬೇಡಿ ಎಂದ ವೃದ್ಧನಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ