LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಜು ಝವರ್‌ ಕೊಲೆ ಪ್ರಕರಣ; ಡಾ. ಶಿರಗಾವಿ ಹಾಗು ಡಾ. ಪಾಟೀಲ ನ್ಯಾಯಾಂಗ ಬಂಧನಕ್ಕೆ

ಗೋಕಾಕ : ಗೋಕಾಕ ಬಂಗಾರದ ವ್ಯಾಪಾರಿ ರಾಜು ಝವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಡಾ. ಸಚಿನ್ ಶಿರಗಾವಿ ಮತ್ತು ಹುಕ್ಕೇರಿಯ ವೈದ್ಯ ಡಾ. ಶಿವಾನಂದ ಪಾಟೀಲ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು 14 ದಿನ ಕಸ್ಟಡಿಗೆ ಒಪ್ಪಿಸಿದೆ.



ಕಳೆದ ಫೆಬ್ರುವರಿ 20 ರಂದು ಝವರ್ ಅವರನ್ನು ಡಾ. ಸಚಿನ್ ಶಿರಗಾವಿ, ಹುಕ್ಕೇರಿ ತಾಲ್ಲೂಕಿನ ಶಿರಾಡ್ಯಾಣ ಗ್ರಾಮದ ಆಯುರ್ವೇದ ವೈದ್ಯ ಡಾ. ಶಿವಾನಂದ ಕಾಡಗೌಡ ಪಾಟೀಲ ಅವರು ಮೂವರು ಬಾಡಿಗೆ ಹಂತಕರ ಸಹಾಯದಿಂದ ಗೋಕಾಕದ ಯೋಗಿಕೊಳ್ಳದಲ್ಲಿ ಕೊಲೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಡಾ.ಪಾಟೀಲರ ಪಾತ್ರ ಇರುವ ಬಗ್ಗೆ ಗೊತ್ತಾದಾಗ ಅವರನ್ನೂ ಸಹ ವಶಕ್ಕೆ ಪಡೆದು, ಅವರಿಂದ ಮಾಹಿತಿ ಪಡೆದುಕೊಂಡು ನಂತರ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.



ಝವರ್ ಮೇಲೆ ಹಲ್ಲೆಯಾಗಿ ಐದು ದಿನಗಳಾಗಿದ್ದು ಆರೋಪಿಗಳು ತಾವು ಮಾಡಿರುವ ಕೊಲೆಯನ್ನು ಸಹ ಒಪ್ಪಿಕೊಂಡಿದ್ದಾರೆ. ಆದರೂ ಝವರ್ ಅವರ ಪತ್ತೆಯಾಗಿಲ್ಲ. ಹಾಗಾಗಿ ನಾವು ಅವರ ಕೊಲೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ದೊರೆತ ರಕ್ತವನ್ನು ಪರೀಕ್ಷೆ ನಡೆಸಿದಾಗ ಅದು ಸಚಿನ್‌ ಅವರ ರಕ್ತಕ್ಕೆ ಹೊಂದಾಣಿಕೆ ಆಗಿದೆ ಎಂದು ತಿಳಿದು ಬಂದಿದೆ. ಆ ಕಾರಣ ಅವರ ಕೊಲೆಯಾಗಿರುವುದು ಖಚಿತ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎನ್ನಲಾಗಿದೆ.



ಝವರ್ ಅವರಿಂದ 1.90 ಕೋಟಿ ರೂಪಾಯಿ ಹಣ ಸಾಲದ ರೂಪದಲ್ಲಿ ಪಡೆದಿದ್ದ ಗೋಕಾಕ ನಿವಾಸಿ ಡಾ. ಶಿರಗಾವಿ ಅವರು ಸ್ನೇಹಿತನಾದ ರಾಜು ಝವರ್ ಅವರನ್ನು ತಮ್ಮದೇ ಕಾರಿನಲ್ಲಿ ಕರೆದುಕೊಂಡು ಯೋಗಿಕೊಳ್ಳದ ಬಳಿ ಚಾಕುವಿನಿಂದ ಇರಿದು, ಕುತ್ತಿಗೆ ಕತ್ತರಿಸಿ ನೀರಿಗೆ ಎಸೆದಿದ್ದರು. ಇದಕ್ಕೆ ಡಾ. ಶಿವಾನಂದ ಪಾಟೀಲ ಮತ್ತು ಮೂವರು ಬಾಡಿಗೆ ಹಂತಕರ ಸಹಾಯ ಬಳಸಲಾಗಿದೆ. ಮೂವರೂ ಬಾಡಿಗೆ ಹಂತಕರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ