LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಮುಖವೇ ಬೋರ್ಡಿಂಗ‌ ಪಾಸ್‌; ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ವ್ಯವಸ್ಥೆ

ಅಬುಧಾಬಿ: ಯುಎಇ ರಾಜಧಾನಿ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಮುಖವನ್ನು ಸ್ಕ್ಯಾನ್‌ ಮಾಡಿ, ಬೋರ್ಡಿಂಗ್‌ ಪಾಸ್‌ ನೀಡಲಾಗುತ್ತದೆ.





ಇನ್ನು ಮುಂದೆ ನೀವು ಪಾಸ‌ಪೋರ್ಟ‌ ಅಥವಾ ಟಿಕೆಟ್‌ ತೋರಿಸಬೇಕಾಗಿಲ್ಲ. ಆಯ್ದ ಸ್ವಯಂಸೇವಾ ಬ್ಯಾಗೇಜ್‌ ಟಚ್ ‌ಪಾಯಿಂಟ್‌ಗಳು, ವಲಸೆ ಇ-ಗೇಟ್‌ಗಳು, ಬೋರ್ಡಿಂಗ‌ ಗೇಟ್‌ಗಳು ಹಾಗೂ ಎಲ್ಲ ಪ್ರಯಾಣಿಕ ಟಚ್ ‌ಪಾಯಿಂಟ್‌ಗಳಲ್ಲಿ ಮುಖ ಗುರುತಿಸುವ ಸೇವೆಗಳನ್ನು ಆರಂಭಿಸಲಾಗಿದೆ. ಅಬುಧಾಬಿ ಮೂಲದ ಟೆಕ್‌ ಕಂಪನಿ ನೆಕ್ಸ್ಟ್50 ಈ ಸುಧಾರಿತ ಕೃತಕ ಬುದ್ಧಿ ಮತ್ತೆ ಆಧರಿಸಿದ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು  ಖಲೀಜ‌ ಟೈಮ್ಸ ಪತ್ರಿಕೆ‌ ವರದಿ ಮಾಡಿದೆ.



ಹೈಟೆಕ್‌ ಬಯೋಮೆಟ್ರಿಕ್‌ ಕ್ಯಾಮೆರಾ ಮೂಲಕ ಪ್ರಯಾಣಿಕರ ಎಲ್ಲ ವಿವರಗಳನ್ನೂ ಗ್ರಹಿಸಿಕೊಂಡು ಈ ಯಂತ್ರವು ಎಲ್ಲ ದಾಖಲೆಗಳನ್ನು ದೃಢೀಕರಿಸುತ್ತದೆ. ಇದರಿಂದ ಪ್ರಯಾಣಿಕರಿಗೆ ಸರಳ, ಆರಾಮದಾಯಕ, ಸಂಪರ್ಕರಹಿತ ಸೇವೆ ಲಭ್ಯವಾಗಲಿದ್ದು, ಸರತಿಯಲ್ಲಿ ನಿಂತು ಕಾಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುವುದಿಲ್ಲ ಎಂದು ಅಬುಧಾಬಿ ಏರ‌ಪೋರ್ಟ ಸಿಇಒ ಜಮಾಲ್‌ ಸಲೀಮ ಅಲ್‌ ಧಹೇರಿ ಹೇಳಿದ್ದಾರೆ.



Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗರ ಪಂಚಮಿ ದಿನವೇ ಹಾವು ಕಡಿತಕ್ಕೆ ಮಹಿಳೆ ಬಲಿಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆ