LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿಯಲ್ಲಿ ಪ್ರತಿಭಟನೆ ಜೋರು: ಬಸ್ ಚಾಲಕರ ಕೈ ಕಟ್ಟಿಹಾಕಿದ ರೈತರು!

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ

ರೈತರು ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.



ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಹೋದಾಗ ಓಡಿ ಬಂದು ಅಡ್ಡಗಟ್ಟಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿದರು.



ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದ್ದಾರೆ. ಅಧಿವೇಶನದ ಮೊದಲ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದರು. ಅವರನ್ನು ಚೆದುರಿಸಲು ಪೊಲೀಸರು ಮುಂದಾದಾಗ ತೀವ್ರ ವಾಗ್ವಾದ ನಡೆಯಿತು.



ಹಲವು ವಾಹನಗಳು ಸಾಲಾಗಿ ನಿಂತವು. ಇದರ ಮಧ್ಯೆ ಎರಡು ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಡು ಮುಂದೆ ಸಾಗಿದಾಗ ಬೆನ್ನಟ್ಟಿ ಬಂದ ರೈತರು ಬಸ್‌ ಅಡ್ಡಗಟ್ಟಿದರು. ಒಳಗೆ ಹತ್ತಿ ಬಸ್ ಚಾಲಕರ ಕೈಗಳನ್ನು ಹಸಿರು ಟವಲ್ ನಿಂದ ಕಟ್ಟಿದರು. ಅದೇ ಕೈಗಳನ್ನು ಬಸ್ಸಿನ ಸ್ಟೇರಿಂಗಿಗೂ ಕಟ್ಟಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡೊಲ್ಲ: ರಾಜನಾಥ ಸಿಂಗ್ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಠ್; ಜು.1ರಿಂದ ಅಧಿಕಾರ ಸ್ವೀಕಾರಪರಾರಿ ನೀರವ ಮೋದಿ ಪ್ರಕರಣಕ್ಕೆ ತಿರುವು: ಭ್ರಷ್ಟಾಚಾರದ ಸಾಕ್ಷ್ಯ ಇಲ್ಲ ಎಂದ ಸಿಬಿಐನೀಟ್ ಅಕ್ರಮ, ನಿರುದ್ಯೋಗ ವಿರುದ್ಧ ಕಾಂಗ್ರೆಸ್ ರಣಕಹಳೆ: ರಾಹುಲ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಾವೇಶಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಭಾರತೀಯ ನಾವಿಕರ ಹತ್ಯೆಯ ಕಾವಿನ ನಡುವೆ ಫ್ರಾನ್ಸ, ಸ್ಲೋವೇಕಿಯಾ ದೇಶಗಳ ೧ ವಾರದ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿರೈತರ ಜಮೀನು ಕಬಳಿಸುವ ಯತ್ನ: ಆರ್‌.ಅಶೋಕ ಆರೋಪ4 ಗೋಲುಗಳ ದಾಳಿಯಿಂದ ಅಮೆರಿಕದ ಶುಭಾರಂಭಮಣಿಪುರದಲ್ಲಿ ದಿಗ್ಬಂಧನ: ಪೆಟ್ರೋಲ್ ₹230, ಅಡುಗೆ ಅನಿಲ ₹5,000ಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆ