ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಐವರು ಪಿಎಫ್‌ಐ ಮುಖಂಡರು ವಶಕ್ಕೆ 

ಬೆಳಗಾವಿ: ಇಲ್ಲಿನ ಐವರು ಪಿಎಫ್‌ಐ ಮುಖಂಡರನ್ನು ನಸುಕಿನ ಜಾವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಸುಕಿನ ಜಾವ 4 ಗಂಟೆಗೆ ಅವರ ಮನೆಗಳ ಮೇಲೆ ದಾಳಿ ಮಾಡಿದ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೀಸರ ತಂಡ ಐವರನ್ನು ವಶಕ್ಕೆ ಪಡೆದಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದೆ.

ಎಸಿಪಿ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳು ಸೇರಿದಂತೆ ಹಲವು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.

ಇತ್ತೀಚೆಗೆ ಎನ್‌ಐಎ ದಾಳಿ ಖಂಡಿಸಿ ಇವರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರು. ಈ ಆರೋಪದಡಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.