LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನಿಂತಿದ್ದ ಕ್ಯಾಂಟರ್ ಗೆ ಅಪ್ಪಳಿಸಿದ ಕಾರ್: ಗುತ್ತಿಗೆದಾರ ಸೇರಿ ನಾಲ್ವರ ಮೃತ್ಯು

ಮುದ್ದೇಬಿಹಾಳ: ಕಾರೊಂದು ನಿಂತಿದ್ದ ಕ್ಯಾಂಟರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮದ ಪ್ರಥಮ ದರ್ಜೆ ಸಾರ್ವಜನಿಕ ಕಾಮಗಾರಿಯ ಗುತ್ತಿಗೆದಾರ ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿಯ ಧನ್ನೂರ ಟೋಲ್ ಬಳಿ ಸೆ.26ರ ಗುರುವಾರ ಬೆಳಗಿನ ಜಾವ ನಡೆದಿದೆ.



ಮೃತರನ್ನು ಬಿದರಕುಂದಿಯ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಮುದ್ದೇಬಿಹಾಳದ ರಾಮಣ್ಣ ನಾಯಕ ಮಕ್ಕಳು ಮತ್ತು ಕಾರ್ ಚಾಲಕ ಗುಡ್ನಾಳದ ಮಹ್ಮದ ರಫೀಕ ಎಂದು ಗುರುತಿಸಲಾಗಿದೆ. ‌



ಘಟನಾ ಸ್ಥಳ ಬಾಗಲಕೋಟ ಜಿಲ್ಲೆಯ ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.



ಇವರೆಲ್ಲರೂ ಹೊಸಪೇಟೆ ಬಳಿಯಿರುವ ದೇವಸ್ಥಾನವೊಂದಕ್ಕೆ ಹೋಗಿ ಮರಳಿ ಬರುವಾಗ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡೊಲ್ಲ: ರಾಜನಾಥ ಸಿಂಗ್ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಠ್; ಜು.1ರಿಂದ ಅಧಿಕಾರ ಸ್ವೀಕಾರಪರಾರಿ ನೀರವ ಮೋದಿ ಪ್ರಕರಣಕ್ಕೆ ತಿರುವು: ಭ್ರಷ್ಟಾಚಾರದ ಸಾಕ್ಷ್ಯ ಇಲ್ಲ ಎಂದ ಸಿಬಿಐನೀಟ್ ಅಕ್ರಮ, ನಿರುದ್ಯೋಗ ವಿರುದ್ಧ ಕಾಂಗ್ರೆಸ್ ರಣಕಹಳೆ: ರಾಹುಲ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಾವೇಶಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಭಾರತೀಯ ನಾವಿಕರ ಹತ್ಯೆಯ ಕಾವಿನ ನಡುವೆ ಫ್ರಾನ್ಸ, ಸ್ಲೋವೇಕಿಯಾ ದೇಶಗಳ ೧ ವಾರದ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿರೈತರ ಜಮೀನು ಕಬಳಿಸುವ ಯತ್ನ: ಆರ್‌.ಅಶೋಕ ಆರೋಪ4 ಗೋಲುಗಳ ದಾಳಿಯಿಂದ ಅಮೆರಿಕದ ಶುಭಾರಂಭಮಣಿಪುರದಲ್ಲಿ ದಿಗ್ಬಂಧನ: ಪೆಟ್ರೋಲ್ ₹230, ಅಡುಗೆ ಅನಿಲ ₹5,000ಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆ