LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಅಕ್ರಮ ಸಂಬಂಧವಿದ್ದರೆ ವಿಚ್ಛೇದನ ಕೊಟ್ಟು ಹೋಗಿ, ಸಂಗಾತಿಯನ್ನು ಕೊಲ್ಲಬೇಡಿ

ಬೆಳಗಾವಿ : "ಮಹಿಳೆಯರೇ ನಿಮಗೆ ಪರಪುರುಷರೊಂದಿಗೆ ಅಕ್ರಮ ಸಂಬಂಧವಿದ್ದರೆ ಪತಿಗೆ ವಿವಾಹ ವಿಚ್ಛೇದನ ನೀಡಿ ಅವರಿಂದ ದೂರವಾಗಿ, ಆದರೆ ದಯವಿಟ್ಟು ಪತಿಯನ್ನು ಕೊಲೆ ಮಾಡಬೇಡಿ. ಮಕ್ಕಳನ್ನು, ಹೆತ್ತವರನ್ನು ಅನಾಥರನ್ನಾಗಿ ಮಾಡಬೇಡಿ" ಎಂದು ಕರ್ನಾಟಕ ರಕ್ಷಣಾ ವೇದಿಕೆ ವಿನಂತಿಸಿಕೊಂಡಿದೆ.



ಇತ್ತೀಚಿಗೆ ಪರ ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ ಮಹಿಳೆಯರು ತಮ್ಮ ಪತಿಗಳನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವದರಿಂದ ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.



ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡುವ ಪತ್ನಿಯರಿಗೆ ಮತ್ತು ಇದೇ ಕಾರಣಕ್ಕಾಗಿ ಪತ್ನಿಯನ್ನು ಕೊಲೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಬೇಕೆಂದು ಸರಕಾರಕ್ಕೆ ವಿನಂತಿಸಿಕೊಂಡ ಕುರಿತ ಮನವಿ ಪತ್ರ ಅರ್ಪಿಸಲಾಯಿತು.



ಬೆಳಗಾವಿಯ ಅಂಬೇಡ್ಕರ ನಗರದ ಸಂಧ್ಯಾ ಎಂಬಾಕೆ ತನ್ನ ಪ್ರಿಯಕರ ಬಾಳು ಬಿರಂಜೆ ಮತ್ತು ನಾಲ್ವರು ಸಂಬಂಧಿಕರ ನೆರವಿನಿಂದ ಪತಿ ರಮೇಶ ಕಾಂಬಳೆ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದೂ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.



ರಮೇಶ ಕಾಂಬಳೆಯನ್ನು ಮಾರ್ಚ 23ರಂದು ಕೊಲೆ ಮಾಡಿದ ಮಹಿಳೆಯು ಪತಿಯ ಶವವನ್ನು ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಎಸೆದಿದ್ದಳು. ಎಸೆದ ಶವ ಆಳವಾದ ಕಂದಕಕ್ಕೆ ಬೀಳದೇ ಮರವೊಂದರಲ್ಲಿ ಸಿಕ್ಕಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತು.



ಪತಿಯ ಶವ ಎಸೆದ ನಂತರ ತನ್ನ ಪತಿ ರಮೇಶ ಕಾಣೆಯಾಗಿದ್ದಾರೆ ಎಂದು ಸಂಧ್ಯಾ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿಚಾರಣೆಯಲ್ಲಿ ಸಂಧ್ಯಾ ಹೇಳಿಕೆಗಳು ವಿಭಿನ್ನವಾಗಿರುತ್ತಿದ್ದರಿಂದ ಸಂಶಯಗೊಂಡ ಪೊಲೀಸರು ಅವಳ ಹೆಚ್ಚಿನ ವಿಚಾರಣೆ ನಡೆಸಿದಾಗ, ಅವಳು ತಾನೇ ಪತಿಯನ್ನು ಕೊಂದ ವಿಷಯ ಒಪ್ಪಿಕೊಂಡಳು.



ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಕೊಲೆಯಾದ ರಮೇಶ ಕಾಂಬ್ಳೆ ಸಂಬಂಧಿಕರು ಕೊಲೆಗಡುಕ ಸಂಧ್ಯಾಳನ್ನು "ಚೋರ್ಲಾ ಘಾಟ್‌ ಚಮೇಲಿ" ಎಂದು ಸಂಭೋಧಿಸಿ ಧಿಕ್ಕಾರ ಎಂದು ಘೋಷಣೆ ಕೂಗಿದರು.



ಪತಿಯ ಮೇಲೆ ಪತ್ನಿಗೆ ಮನಸ್ಸಿಲ್ಲದಿದ್ದರೆ ಪತಿ ಅವಳ ಮೈ ಮುಟ್ಟಬಾರದು ಅಂತಾ ಕಾನೂನಲ್ಲೇ ಅವಕಾಶ ಇದೆ. ನಿಮಗೆ ಗಂಡ ಬೇಡವಾದರೆ ಗಂಡನಿಗೆ ವಿಚ್ಛೇದನ ಕೊಟ್ಟು ಹೋಗಿ. ಆದರೆ ಕೊಲೆ ಮಾಡಿ ಮಕ್ಕಳನ್ನು, ತಂದೆ ತಾಯಿಗಳನ್ನು ಅನಾಥ ಮಾಡುವುದು, ನಂತರ ಜೈಲಿಗೆ ಹೋಗೋದು ಯಾರಿಗೆ ಬೇಕು ಈ ಜೀವನ ?’ ಕಾನೂನಿನಲ್ಲಿ ನಿಮಗೆ ಅವಕಾಶ ಇದೆ ಗಂಡನಿಗೆ ಡೈವರ್ಸ್ ಕೊಟ್ಟು ಹೋಗಿ ಆದರೆ ಕೊಲೆ ಮಾಡಬೇಡಿ" ಎಂದ ಕರವೇ ಮುಖಂಡ ಮಹಾದೇವ ತಳವಾರ ಹೇಳಿದರು.



ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಒತ್ತಾಯಿಸಿದ ಪ್ರತಿಭಟನಾಕಾರರು, ರಮೇಶ ಕಾಂಬಳೆ ತಂದೆ ತಾಯಿಗೆ ವಯಸ್ಸಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ಕೊಲೆಯಾದ ರಮೇಶ‌ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು‌.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ