LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಜ್ಯದಲ್ಲಿ ಮಾಸ್ಕ ಕಡ್ಡಾಯ; ರಾತ್ರಿ 1 ಗಂಟೆ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ

ಬೆಳಗಾವಿ: ಕೊರೋನಾ ಸಂಬಂಧ ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಸಂಭ್ರಮಾಚರಣೆಯಲ್ಲಿ ಭಾಗವಹಿಸುವವರು ಮಾಸ್ಕ ಧರಿಸುವುದು ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ ಹೇಳಿದ್ದಾರೆ.



ಸೋಮವಾರ ಸುವರ್ಣಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ, ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆಯ ಬಳಿಕ ಸುಧಾಕರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.



ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಬಾರ್, ಪಬ್ ಹಾಗೂ ಹೊಟೇಲ್​ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಮತ್ತು ಕಡ್ಡಾಯವಾಗಿ ಎಲ್ಲರೂ ಮಾಸ್ಕ ಧರಿಸಬೇಕು ಎಂದು ಅವರು ಹೇಳಿದರು. ಆದರೆ ಮಾಸ್ಕ ಧರಿಸಿದವರಿಗೆ ಯಾವುದೇ ದಂಡ ವಿಧಿಸುವುದಿಲ್ಲ.



ಸಾರ್ವಜನಿಕ ಸ್ಥಳಗಳು, ಶಾಲೆ ಕಾಲೇಜುಗಳು ಹಾಗು ಚಿತ್ರಮಂದಿರಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ ರಾಜಕೀಯ ಸಭೆ, ಸಮಾರಂಭಗಳು, ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.



ಒಳಾಂಗಣ  ಪ್ರದೇಶಗಳಲ್ಲಿ ಆಸನಗಳು ಇರುವಷ್ಟು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಸಹ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡೊಲ್ಲ: ರಾಜನಾಥ ಸಿಂಗ್ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಠ್; ಜು.1ರಿಂದ ಅಧಿಕಾರ ಸ್ವೀಕಾರಪರಾರಿ ನೀರವ ಮೋದಿ ಪ್ರಕರಣಕ್ಕೆ ತಿರುವು: ಭ್ರಷ್ಟಾಚಾರದ ಸಾಕ್ಷ್ಯ ಇಲ್ಲ ಎಂದ ಸಿಬಿಐನೀಟ್ ಅಕ್ರಮ, ನಿರುದ್ಯೋಗ ವಿರುದ್ಧ ಕಾಂಗ್ರೆಸ್ ರಣಕಹಳೆ: ರಾಹುಲ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಾವೇಶಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಭಾರತೀಯ ನಾವಿಕರ ಹತ್ಯೆಯ ಕಾವಿನ ನಡುವೆ ಫ್ರಾನ್ಸ, ಸ್ಲೋವೇಕಿಯಾ ದೇಶಗಳ ೧ ವಾರದ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿರೈತರ ಜಮೀನು ಕಬಳಿಸುವ ಯತ್ನ: ಆರ್‌.ಅಶೋಕ ಆರೋಪ4 ಗೋಲುಗಳ ದಾಳಿಯಿಂದ ಅಮೆರಿಕದ ಶುಭಾರಂಭಮಣಿಪುರದಲ್ಲಿ ದಿಗ್ಬಂಧನ: ಪೆಟ್ರೋಲ್ ₹230, ಅಡುಗೆ ಅನಿಲ ₹5,000ಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆ