LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ರಾಜ್ಯೋತ್ಸವಕ್ಕೆ ಮೇಯರ್, ಉಪಮೇಯರ್ ಆಹ್ವಾನಿಸದಂತೆ ಆಗ್ರಹ

ಬೆಳಗಾವಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ವಾಗ್ವಾದ; ಕರಾಳ ದಿನಾಚರಣೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

ಬೆಳಗಾವಿ, ಅ. 8 (ಸಮದರ್ಶಿ ಸುದ್ದಿ): ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹಣಮಂತ ಕೊಂಗಾಲಿ ಅವರನ್ನು ಆಹ್ವಾನಿಸಬಾರದು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಅಧ್ಯಕ್ಷ ಬಲರಾಮ ಮಾಸೇನಟ್ಟಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ್ ಹಿರೇಕೋಡಿ ಅವರು ಮೇಯರ್ ಮತ್ತು ಉಪಮೇಯರ್ ನಡೆ ನಾಡದ್ರೋಹಕ್ಕೆ ಸಮ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಗುಂಪು, ಮೇಯರ್ ನಗರದ ಪ್ರಥಮ ಪ್ರಜೆಯಾಗಿದ್ದು, ಇಂತಹ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಬಾರದು ಎಂದು ವಾದಿಸಿತು. ಇದರಿಂದ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆಕ್ರೋಶಗೊಂಡ ವಾಜಿದ್ ಹಿರೇಕೋಡಿ ಹಾಗೂ ಬಲರಾಮ ಮಾಸೇನಟ್ಟಿ ಧಿಕ್ಕಾರ ಕೂಗುತ್ತ ಸಭೆಯಿಂದ ಹೊರನಡೆದರು.

ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಶಿಷ್ಟಾಚಾರದ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಎಂಇಎಸ್ ಮುಖಂಡ ಶುಭಂ ಶೆಳಕೆ ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕನ್ನಡಪರ ನಿಲುವು ಬೆಂಬಲಿಸಿದ ಪಾಲಿಕೆ ಸದಸ್ಯರು ಮರಾಠಿ ಮಾತನಾಡಬಾರದು ಹಾಗೂ ಮರಾಠಿಗರ ಮತ ಕೇಳಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಕನ್ನಡಪರ ಮುಖಂಡರು ಆರೋಪಿಸಿದರು. ಅವರ ವಿರುದ್ಧ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ನವೆಂಬರ್ 1ರಂದು ಎಂಇಎಸ್ ನಡೆಸಲು ಉದ್ದೇಶಿಸಿರುವ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದೂ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ. ಆದೇಶ ಉಲ್ಲಂಘಿಸಿ ಆಚರಿಸಿದರೆ ಪ್ರಕರಣ ದಾಖಲಿಸಿ ಗಡಿಪಾರು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸಭೆಯಲ್ಲಿ ಪರಿಸ್ಥಿತಿ ಶಾಂತವಾಯಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವಕ್ಕೆ ಮೇಯರ್, ಉಪಮೇಯರ್ ಆಹ್ವಾನಿಸದಂತೆ ಆಗ್ರಹಮತದಾರರು ಸತ್ತಿದ್ದಾರೆಂದು ಶಾಸಕರ ಲೆಟರ್‌ಹೆಡ್‌ನಲ್ಲಿ ಅರ್ಜಿ: ಯತ್ನಾಳ ಸೇರಿ ಮೂವರ ವಿರುದ್ಧ ಎಫ್‌ಐಆರ್ಸೆನ್ಸೆಕ್ಸ್ 1,045 ಅಂಕ, ನಿಫ್ಟಿ 371 ಅಂಕ ಕುಸಿತ; ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ: ಅಭಿಜೀತ ದೀಪ್ಕೆಮತಗಳ ಕಳ್ಳತನಕ್ಕೆ ಮೂರು ಸಾಕ್ಷ್ಯಗಳಿವೆ, ಮೋದಿ, ಶಾ ಉತ್ತರಿಸಲಿ: ಧ್ರುವ ರಾಠಿಗ್ಯಾನೇಶ ಕುಮಾರ ಹೋದರೆ ಮತ್ತೊಬ್ಬ ಅಜ್ಞಾನೇಶ ಬರುತ್ತಾನೆ, ಎಸ್‌ಐಆರ್‌ ರದ್ದಾಗಲಿ: ಪ್ರಕಾಶ ರಾಜ್ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವಜೇನುನೊಣಗಳ ದಾಳಿಗೆ ಬೆಳಗುಂದಿ ರೈತ ಬಲಿಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಅ. ೧೧ರಿಂದ ನವರಾತ್ರಿ ಉತ್ಸವಸುಳ್ಳು ಆರೋಪಗಳ ವಿರುದ್ಧ ಕಾನೂನು ಸಮರ: ಸತೀಶ ಜಾರಕಿಹೊಳಿ