ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೊರ್ಬಿ ತೂಗು ಸೇತುವೆ ದುರಂತ; ತುಕ್ಕು ಹಿಡಿದಿದ್ದ ಹಳೆಯ ಕೇಬಲ್

ಅಹಮದಾಬಾದ, ೩- ಗುಜರಾತಿನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಭವಿಸಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಹಿರಂಗವಾಗಿದೆ. ತೂಗು ಸೇತುವೆ ನವೀಕರಣದ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿ ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡಿತ್ತು ಎನ್ನಲಾಗಿದೆ.

ಅಲ್ಲದೇ ನವೀಕರಣದ ವೇಳೆ ಕೇಬಲ್ ಹಳೆಯದಾಗಿ ತುಕ್ಕು ಹಿಡಿದಿದ್ದರೂ ಸಹ ಅವುಗಳನ್ನು ಬದಲಿಸಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಕಾವುಲುಗಾರರು, ಟಿಕೆಟ್ ಸಿಬ್ಬಂದಿ ಸೇರಿದಂತೆ ಈಗ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಒರೆವಾ ಕಂಪನಿಯ ಬಂಧಿತ ಸಿಬ್ಬಂದಿ ದೀಪಕ ಪರೇಕ ಎಂಬಾತ ಈ ಘಟನೆ ನಡೆದಿರುವುದು ದುರದೃಷ್ಟಕರ. ಇದು ದೇವರ ಇಚ್ಛೆ ಎಂದು ಹೇಳಿದ್ದಾನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.